ವಿಶ್ವದ ಉಳಿದ ರಾಷ್ಟ್ರಗಳಂತೆ ಇರಾನ್ನಲ್ಲೂ ಕೂಡ ಕೊರೊನಾ ವೈರಸ್ ತನ್ನ ರುದ್ರ ನರ್ತನವನ್ನ ತೋರಿಸುತ್ತಲೇ ಬಂದಿದೆ.
ಈ ಸಂಕಷ್ಟದ ನಡುವೆ ಮಹಿಳೆಯರ ಗುಂಪೊಂದು ಮಾಸ್ಕ್ಗಳನ್ನ ತಯಾರಿಸಿ ಮಾರಾಟ ಮಾಡುವ ಮೂಲಕ ತಮ್ಮ ಬದುಕನ್ನ ಕಟ್ಟಿಕೊಳ್ತಿದ್ದಾರೆ.
2016ರಲ್ಲಿ ನಿರ್ಮಾಣವಾದ ಬವಾರ್(ನಂಬಿಕೆ) ಎಂಬ ಹೆಸರಿನ ಈ ಸಂಸ್ಥೆ ಅನೇಕ ಮಹಿಳೆರಿಗೆ ಹೊಲಿಗೆ ಯಂತ್ರಗಳನ್ನ ದೇಣಿಗೆ ನೀಡೋದ್ರ ಮೂಲಕ ಅವರಿಗೆ ನೆರವಾಗಿದೆ. ವಿಧವೆಯರಿಗೆ, ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರ ಕಲ್ಯಾಣಕ್ಕೆ ಈ ಸಂಸ್ಥೆ ಶ್ರಮಿಸುತ್ತಿದೆ.
ಬವಾರ್ ಸಂಸ್ಥೆ ಸಂಸ್ಥಾಪಕಿ ಸಾರಾ ಚತರ್ಬಿಯಾನ್ ಈ ವಿಚಾರವಾಗಿ ಮಾತನಾಡಿ ಸಂಕಷ್ಟದಲ್ಲಿರುವವರಿಗೆ ಮೀನು ನೀಡೋ ಬದಲು ಮೀನುಗಾರಿಕೆಯನ್ನ ಕಲಿಸಿದ್ರೆ ಅವರು ಬದುಕನ್ನ ಸ್ವತಂತ್ರ್ಯವಾಗಿ ಕಟ್ಟಿಕೊಳ್ತಾರೆ. ಅದೇ ರೀತಿ ನಾವು ಕೂಡ ಮಹಿಳೆಯರಿಗೆ ಬದುಕುವ ದಾರಿಯನ್ನ ತೋರಿಸಿಕೊಡ್ತಿದ್ದೇವೆ ಎಂದು ಹೇಳಿದ್ರು.
ಇರಾನ್ನಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗ್ತಾನೇ ಇದ್ದು ಮಾಸ್ಕ್ಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸುಮಾರು 50 ಮಂದಿಯಿರುವ ಮಹಿಳೆಯರ ಗುಂಪು ಹೊಲಿಗೆ ಯಂತ್ರದಲ್ಲಿ ಮಾಸ್ಕ್ಗಳನ್ನ ತಯಾರಿಸಿ ಫಾರ್ಮಾ ಕಂಪನಿಗಳಿಗೆ ಮಾರುತ್ತಾರೆ. ಫಾರ್ಮಾ ಕಂಪನಿಗಳು ಇದಕ್ಕೆ ಮೂರನೇ ಲೇಯರ್ನ್ನ ಹಾಕಿ ಅದನ್ನ ಮಾರಾಟ ಮಾಡುತ್ತಿದೆ. ಈ ಗುಂಪಿನಲ್ಲಿನ 41 ವರ್ಷದ ಮಹಿಳೆ ಎಲ್ಹಾಮ್ ಕರಮಿ ಈ ವಿಚಾರವಾಗಿ ಮಾತನಾಡಿ ಬವಾರ್ ಸಂಸ್ಥೆಯಿಂದ ನನ್ನ ಇಬ್ಬರು ಮಕ್ಕಳನ್ನ ಸಾಕೋದು ಅನುಕೂಲವಾಗಿದೆ ಎಂದು ಸಂತಸ ಹೊರಹಾಕಿದ್ರು.