ಮೊಬೈಲ್ ಫೋನ್ ನೀರಿನಲ್ಲಿ ಬಿತ್ತು ಅಂದರೆ ಕತೆ ಮುಗೀತು ಅಂತಾನೇ ಅರ್ಥ. ನಿಮ್ಮ ಅದೃಷ್ಟ ಚೆನ್ನಾಗಿತ್ತು ಅಂದರೆ ರಿಪೇರಿ ಬಳಿಕ ಮೊಬೈಲ್ ಸರಿ ಆಗಲೂಬಹುದು. ಆದರೆ ಆರು ತಿಂಗಳುಗಳ ಕಾಲ ನದಿಯಲ್ಲಿ ಇರುವ ಮೊಬೈಲ್ ಒಂದು ಸಹಜ ಸ್ಥಿತಿಯಲ್ಲೇ ನಿಮ್ಮ ಕೈ ಸೇರುತ್ತೆ ಅಂದರೆ ನಿಮಗೆ ನಂಬೋಕೆ ಸಾಧ್ಯವಾ..?
ಐಫೋನ್ ಕೊಂಡುಕೊಳ್ಳೋದು ಅಂದರೆ ಎಲ್ಲರಿಂದಲೂ ಸಾಧ್ಯವಾಗುವ ಕೆಲಸವಲ್ಲ. ಹೀಗಾಗಿ ಇಂತಹ ಐಷಾರಾಮಿ ಮೊಬೈಲ್ ಫೋನ್ಗಳು ನೆಲಕ್ಕೆ ಉರುಳಿದ್ವು ಅಂದ್ರೆನೆ ಹೃದಯ ನಿತ್ತಂತೆ ಆಗುತ್ತೆ. ಅಂತದ್ರಲ್ಲಿ ವ್ಯಕ್ತಿಯೊಬ್ಬ ತನ್ನ ಐ ಫೋನ್ನ್ನು ನದಿಯಲ್ಲಿ ಕಳೆದುಕೊಂಡಿದ್ದರು.
ರಾಜ್ಯದಲ್ಲಿ ಹೆಚ್ಚಿದ ಕೊರೋನಾ ತಡೆಗೆ ಕಠಿಣ ನಿಯಮ, ಲಾಕ್ಡೌನ್ ಜಾರಿ ಬಗ್ಗೆ ಇಂದು ನಿರ್ಧಾರ
ಆದರೆ ಆಶ್ಚರ್ಯಕರ ವಿಚಾರ ಅಂದರೆ ಈ ಮೊಬೈಲ್ ಬರೋಬ್ಬರಿ 6 ತಿಂಗಳ ಬಳಿಕ ಈಜುಗಾರರೊಬ್ಬರ ಕೈ ಸೇರಿದೆ. ಇದಕ್ಕೂ ಅಚ್ಚರಿಯ ವಿಚಾರ ಅಂದರೆ 6 ತಿಂಗಳುಗಳ ಕಾಲ ನೀರಿನಲ್ಲಿ ಇದ್ದರೂ ಸಹ ಈ ಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕ್ಲೇಯ್ಟನ್ ಹೆಲ್ಕೆನ್ಬರ್ಗ್ ಎಂಬವರು ಹ್ಯಾರಿಸನ್ ಹಾಟ್ ಸ್ಪ್ರಿಂಗ್ನ ಕೆರೆಯಲ್ಲಿ ಈ ಮೊಬೈಲ್ನ್ನು ಪತ್ತೆ ಮಾಡಿದ್ದಾರೆ. ಹಾಗೂ ಈ ಮೊಬೈಲ್ನ್ನು ಮಾಲೀಕನಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ .ಈ ಐಫೋನ್ 11ನ್ನು ಮಾಲೀಕ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ದೋಣಿಯಲ್ಲಿ ವಿಹಾರ ಮಾಡುತ್ತಿದ್ದ ವೇಳೆ ಕಳೆದುಕೊಂಡಿದ್ದರಂತೆ.