alex Certify ಕೊರೊನಾ ವಿರುದ್ಧ ಜಾಗೃತಿಗಾಗಿ ʼಕ್ರಿಸ್ಮಸ್ ಟ್ರೀʼ ಅಲಂಕಾರ ಹೇಗಿತ್ತು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿರುದ್ಧ ಜಾಗೃತಿಗಾಗಿ ʼಕ್ರಿಸ್ಮಸ್ ಟ್ರೀʼ ಅಲಂಕಾರ ಹೇಗಿತ್ತು ಗೊತ್ತಾ….?

Indonesian Church Puts Masks, Sanitizer on Christmas Tree to Spread Awareness

ಕೋವಿಡ್-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುವ ಇಂಡೋನೇಷ್ಯಾದ ಕ್ಯಾಥೋಲಿಕ್ ಚರ್ಚ್ ಒಂದು ಕ್ರಿಸ್ಮಸ್ ಟ್ರೀಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳಿಂದ ಅಲಂಕಾರ ಮಾಡಿದೆ.

ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ ನಗರವಾದ ಸುರಾಬಯಾದ ಚರ್ಚ್‌‌ನಲ್ಲಿ, ಬಿದಿರಿನ ಅಸ್ಥಿಯಿಂದ ಆರಂಭಿಸಿ, ಮೂರು ಮೀಟರ್‌ ಎತ್ತರ ಈ ವೃಕ್ಷವನ್ನು ನಿರ್ಮಿಸಲಾಗಿದೆ. ಈ ಕೆಲಸಕ್ಕೆ ಸ್ಥಳೀಯ ಮುಸ್ಲಿಂ ಸಮುದಾಯವೂ ಕೈ ಜೋಡಿಸಿದೆ.

ಇಂಡೋನೇಷ್ಯಾದಲ್ಲೂ ಸಹ ಕ್ರಿಸ್ಮಸ್ ಸಾರ್ವಜನಿಕ ರಜೆಯಾಗಿದೆ. ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶವಾದ ಇಂಡೋನೇಷ್ಯಾದಲ್ಲಿ ಒಟ್ಟು 27 ಕೋಟಿ ಜನಸಂಖ್ಯೆಯ ಪೈಕಿ 10%ನಷ್ಟು ಕ್ರೈಸ್ತರಿದ್ದಾರೆ.

ಕೋವಿಡ್-19 ಸೋಂಕಿತರ ಸಂಖ್ಯೆಗಳು ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಮಾಡದಂತೆ ಅಲ್ಲಿನ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...