ಕೊರೊನಾದಿಂದಾಗಿ ಈ ವರ್ಷದ ಕ್ರಿಸ್ಮಸ್ಗೆ ಸಿದ್ಧತೆ ಮಂಕಾಗಿ ಸಾಗುತ್ತಿದೆ. ಈ ಬಾರಿಯ ಕ್ರಿಸ್ಮಸ್ನಲ್ಲಿ ಹಬ್ಬದ ಆಚರಣೆಗಿಂತ ಹೆಚ್ಚು ಕೊರೊನಾ ಮಾರ್ಗಸೂಚಿಗಳ ಕಡೆ ಗಮನಹರಿಸಬೇಕಾದ ಅನಿವಾರ್ಯಕತೆ ಹೆಚ್ಚಾಗಿದೆ.
ಕೊರೊನಾದಿಂದಾಗಿ ಸದ್ಯ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಹೆಚ್ಚಾಗಿದೆ. ಹೀಗಾಗಿ ಇಂಡೋನೇಷಿಯಾದಲ್ಲಿ ಕ್ರಿಸ್ಮಸ್ ಜೊತೆಗೆ ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳಿಂದಲೇ ಕ್ರಿಸ್ಮಸ್ ಗಿಡವನ್ನ ಸಿಂಗರಿಸಲಾಗಿದೆ.
ಇಂಡೋನೆಷಿಯಾದ ಸುರಬಯಾದಲ್ಲಿರುವ ಕ್ಯಾಥೋಲಿಕ್ ಚರ್ಚ್ ಒಂದರಲ್ಲಿ ಈ ಬಾರಿ ಕ್ರಿಸ್ ಮಸ್ ಗಿಡವನ್ನ ವಿಶೇಷವಾಗಿ ಸಿಂಗರಿಸಲಾಗಿದೆ. ಲೈಟ್ ಹಾಗೂ ಅಲಂಕಾರಿಕ ವಸ್ತುಗಳನ್ನ ಬಳಕೆ ಮಾಡುವ ಬದಲು ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನ ಬಳಕೆ ಮಾಡಲಾಗಿದೆ.
ಕ್ರಿಸ್ ಮಸ್ ಗಿಡಕ್ಕೆ ಅಲಂಕರಿಸಲು ಮನೆಯಿಂದ ತಯಾರು ಮಾಡಿದ ಮಾಸ್ಕ್ಗಳನ್ನೇ ಬಳಕೆ ಮಾಡಲಾಗಿದೆ. ಈ ಅಲಂಕಾರಕ್ಕೆ ಕೇವಲ ಕ್ರಿಶ್ಚಿಯನ್ನರು ಮಾತ್ರವಲ್ಲದೇ ಸ್ಥಳೀಯ ಮುಸ್ಲಿಮರು ಮಾಸ್ಕ್ಗಳನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ.