ಭಾಂಗ್ರಾ ನೃತ್ಯ ಮಾಡುತ್ತಾ ಫಿಟ್ನೆಸ್ ಕಾಪಾಡುವುದನ್ನು ಹೇಳಿಕೊಡುತ್ತಿರುವ ಭಾರತದ ಮೂಲದ ರಾಜೀವ್ ಗುಪ್ತಾ ಎಂಬವರಿಗೆ ಪ್ರತಿಷ್ಠಿತ ‘Point of Light’ ಪ್ರಶಸ್ತಿ ಸಂದಿದೆ.
ಬಿಬಿಸಿ ವಾಹಿನಿಯಲ್ಲಿ ಸರಣಿಯೊಂದರ ನಿರ್ಮಾಪಕರಾಗಿರುವ ಗುಪ್ತಾ, ‘Bhangracise’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಆ ಮೂಲಕ ಪಂಜಾಬೀ ನೃತ್ಯವನ್ನು ಜನರಿಗೆ ಕಲಿಸುತ್ತಾ ಬಂದಿದ್ದಾರೆ. ತಮ್ಮ ಈ ಕೆಲಸವನ್ನು ಅವರು ಕಳೆದ 15 ವರ್ಷಗಳಿಂದ ಮ್ಯಾಂಚೆಸ್ಟರ್‌ನಲ್ಲಿ ಮಾಡುತ್ತಾ ಬಂದಿದ್ದಾರೆ.
2019ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ತಂಡಗಳ ನಡುವೆ ಮ್ಯಾಂಚೆಸ್ಟರ್‌ನಲ್ಲಿ ಪಂದ್ಯ ನಡೆದ ವೇಳೆ ಇದೇ ಭ್ರಾಂಗ್ರಾಚೈಸ್ ತಂಡವು ಕ್ರೀಡಾಂಗಣದಲ್ಲಿ ನೃತ್ಯ ಮಾಡಿತ್ತು. ಇದೇ ತಂಡವು 2012ರ ಲಂಡನ್ ಒಲಿಂಪಿಕ್ಸ್ ಸಂದರ್ಭದಲ್ಲೂ ಸಹ ಪ್ರದರ್ಶನ ನೀಡಿತ್ತು.
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಜನರೆಲ್ಲಾ ಮನೆಗಳಲ್ಲಿ ಲಾಕ್‌ಡೌನ್ ಆಗಿರುವ ವೇಳೆ, ಅವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದನ್ನು ಹೇಳಿಕೊಡುತ್ತಿದೆ ಭಾಂಗ್ರಾಚೈಸ್. ಈ ಮೂಲಕ ಜನರಿಗೆ ಕೇವಲ ಫಿಟ್ನೆಸ್ ಮಾತ್ರವಲ್ಲದೇ, ಪಾಸಿಟಿವ್ ಮನಸ್ಥಿತಿಗಳನ್ನು ಕಾಪಾಡಿಕೊಳ್ಳಲು ಸಹ ನೆರವಾಗುತ್ತಿದ್ದಾರೆ ಗುಪ್ತಾ.
https://www.instagram.com/p/CCGH8U9HsNx/?utm_source=ig_embed
https://www.instagram.com/p/CDTOaPxncAp/?utm_source=ig_embed
https://www.instagram.com/tv/CCyIDQTntIz/?utm_source=ig_embed
https://www.instagram.com/p/CCsyjjPnFz2/?utm_source=ig_embed