ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೊರೊನಾ ರೆಸ್ಪಾನ್ಸ್ ಟೀಂಗೆ ಭಾರತೀಯ ಮೂಲದ ವಿದುರ್ ಶರ್ಮಾರನ್ನ ಆಯ್ಕೆ ಮಾಡಿದ್ದಾರೆ.
ಕೋವಿಡ್ 19 ಪ್ರತಿಕ್ರಿಯೆ ತಂಡಕ್ಕೆ ವಿದುರ್ ಶರ್ಮಾ ನೀತಿ ಸಲಹೆಗಾರರನ್ನಾಗಿ ನೇಮಕ ಮಾಡಿ ಶುಕ್ರವಾರ ಶ್ವೇತ ಭವನದಿಂದ ಪ್ರಕಟಣೆ ಹೊರಡಿಸಲಾಗಿದೆ.
ಒಬಾಮಾ ಆಡಳಿತದ ಅವಧಿಯಲ್ಲಿ ಶರ್ಮಾ ದೇಶಿಯ ನೀತಿ ಮಂಡಳಿಯಲ್ಲಿ ಆರೋಗ್ಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಜೊತೆಯಲ್ಲಿ ಪ್ರೊಟೆಕ್ಟ್ ಅವರ್ ಕೇರ್ ನಲ್ಲಿ ಉಪ ಸಂಶೋಧನಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವಿಸ್ಕನ್ಸಿನ್ ನಲ್ಲಿ ಜನಿಸಿ ಮಿನ್ನೆಸೋಟಾದಲ್ಲಿ ಬೆಳೆದ ಶರ್ಮಾ ಪೋಷಕರು ಭಾರತೀಯ ಮೂಲದವರಾಗಿದ್ದಾರೆ. ವಿದುರ್ ಶರ್ಮಾ ಹಾರ್ವಡ್ ಟಿ.ಹೆಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಹಾಗೂ ಲ್ಯೂಯಿಸ್ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ .
ಅಮೆರಿಕದಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ಕಾರ್ಯಕ್ರಮವನ್ನ ಮೇಲ್ವಿಚಾರಣೆ ಮಾಡುವ ಸಲುವಾಗಿ ಈ ರೆಸ್ಪಾನ್ಸ್ ತಂಡವನ್ನ ರಚನೆ ಮಾಡಲಾಗಿದೆ.