alex Certify ಜೋ ಬಿಡೆನ್​ರ ಕೊರೊನಾ ರೆಸ್ಪಾನ್ಸ್​ ಟೀಂಗೆ ಭಾರತೀಯ ಮೂಲದ ವಿದುರ್ ಶರ್ಮಾ ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೋ ಬಿಡೆನ್​ರ ಕೊರೊನಾ ರೆಸ್ಪಾನ್ಸ್​ ಟೀಂಗೆ ಭಾರತೀಯ ಮೂಲದ ವಿದುರ್ ಶರ್ಮಾ ಆಯ್ಕೆ

ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೊರೊನಾ​ ರೆಸ್ಪಾನ್ಸ್ ಟೀಂಗೆ ಭಾರತೀಯ ಮೂಲದ ವಿದುರ್​ ಶರ್ಮಾರನ್ನ ಆಯ್ಕೆ ಮಾಡಿದ್ದಾರೆ.

ಕೋವಿಡ್​ 19 ಪ್ರತಿಕ್ರಿಯೆ ತಂಡಕ್ಕೆ ವಿದುರ್​ ಶರ್ಮಾ ನೀತಿ ಸಲಹೆಗಾರರನ್ನಾಗಿ ನೇಮಕ ಮಾಡಿ ಶುಕ್ರವಾರ ಶ್ವೇತ ಭವನದಿಂದ ಪ್ರಕಟಣೆ ಹೊರಡಿಸಲಾಗಿದೆ.

ಒಬಾಮಾ ಆಡಳಿತದ ಅವಧಿಯಲ್ಲಿ ಶರ್ಮಾ ದೇಶಿಯ ನೀತಿ ಮಂಡಳಿಯಲ್ಲಿ ಆರೋಗ್ಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಜೊತೆಯಲ್ಲಿ ಪ್ರೊಟೆಕ್ಟ್​ ಅವರ್​ ಕೇರ್ ನಲ್ಲಿ ಉಪ ಸಂಶೋಧನಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವಿಸ್ಕನ್ಸಿನ್ ​ನಲ್ಲಿ ಜನಿಸಿ ಮಿನ್ನೆಸೋಟಾದಲ್ಲಿ ಬೆಳೆದ ಶರ್ಮಾ ಪೋಷಕರು ಭಾರತೀಯ ಮೂಲದವರಾಗಿದ್ದಾರೆ. ವಿದುರ್​ ಶರ್ಮಾ ಹಾರ್ವಡ್​ ಟಿ.ಹೆಚ್​. ಚಾನ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್ ಹಾಗೂ ಲ್ಯೂಯಿಸ್​ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ .

ಅಮೆರಿಕದಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ಕಾರ್ಯಕ್ರಮವನ್ನ ಮೇಲ್ವಿಚಾರಣೆ ಮಾಡುವ ಸಲುವಾಗಿ ಈ ರೆಸ್ಪಾನ್ಸ್ ತಂಡವನ್ನ ರಚನೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...