alex Certify ಬಟನ್‌ ಗಳಿಂದಲೇ ಮಹಾತ್ಮಾ ಗಾಂಧಿ ಚಿತ್ರ ರಚಿಸಿದ NRI ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟನ್‌ ಗಳಿಂದಲೇ ಮಹಾತ್ಮಾ ಗಾಂಧಿ ಚಿತ್ರ ರಚಿಸಿದ NRI ಮಹಿಳೆ

UAEನಲ್ಲಿ ನೆಲೆಸಿರುವ ಭಾರತ ಮೂಲದ ಕಲಾವಿದರೊಬ್ಬರು ಮರುಬಳಕೆ ಮಾಡಲಾದ 5000 ಬಟನ್ ‌ಗಳನ್ನು ಬಳಸಿಕೊಂಡು ಮಹಾತ್ಮಾ ಗಾಂಧಿ ಚಿತ್ರವನ್ನು ರಚಿಸಿದ್ದಾರೆ. ಕಳೆದ 29 ವರ್ಷಗಳಿಂದ ಈ ದೇಶದಲ್ಲಿ ನೆಲೆಸಿರುವ ರಶೀದಾ ಅದಿಲ್ ಈ ಕಲಾಕೃತಿಯನ್ನು ಮೂರು ತಿಂಗಳ ಪರಿಶ್ರಮದಿಂದ ರಚಿಸಿದ್ದಾರೆ.

ಶಾರ್ಜಾದಲ್ಲಿರುವ ಕಲಾಶಾಸ್ತ್ರದ ಶಿಕ್ಷಕಿ ತ್ಯಾಜ್ಯ ವಸ್ತುಗಳಿಗೆ ಸುಂದರ ರೂಪ ಕೊಡುವುದರಲ್ಲಿ ಪರಿಣಿತೆಯಾಗಿದ್ದಾರೆ. ತಮ್ಮ ಈ ಸುಂದರ ಕಲಾಕೃತಿಯನ್ನು ರಶೀದಾ ಸ್ವಾತಂತ್ರ‍್ಯೋತ್ಸವಕ್ಕೆ ಅರ್ಪಿಸಿದ್ದಾರೆ.

“ನನ್ನ ತವರು ದೇಶವಾದ ಭಾರತಕ್ಕೆ ನನ್ನ ಈ ಪುಟ್ಟ ಕೊಡುಗೆಗೆಂದು ನನ್ನ ಹೃದಯ ಹಾಗೂ ಆತ್ಮವನ್ನು ಧಾರೆಯೆರೆದಿದ್ದೇನೆ. ಸ್ವಾತಂತ್ರ‍್ಯ ಚಳವಳಿಯಲ್ಲಿ ದಣಿವಿಲ್ಲದೇ ಶ್ರಮಿಸಿದ ಮಹಾತ್ಮಾ ಗಾಂಧಿಯಂಥ ಸ್ವಾತಂತ್ರ‍್ಯ ಹೋರಾಟಗಾರರಿಂದ ಸ್ಪೂರ್ತಿ ಪಡೆದುಕೊಂಡಿದ್ದೇನೆ. ತ್ರಿವರ್ಣದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಮೂಡಿಸಲು ನಾನು ಕಳೆದ ಮೂರು ತಿಂಗಳಿನಿಂದ ಪ್ರತಿನಿತ್ಯ ನಾಲ್ಕು ಗಂಟೆಗಳ ಮಟ್ಟಿಗೆ ಪರಿಶ್ರಮ ಹಾಕುವ ಮೂಲಕ ಕೇಸರಿ, ಹಸಿರು ಹಾಗೂ ಬಿಳಿ ಹಾಗೂ ಕಪ್ಪು ಬಣ್ಣದ ಗುಂಡಿಗಳನ್ನು ಆರಿಸಿ ಬಹಳ ತಾಳ್ಮೆಯಿಂದ ಈ ಕೆಲಸ ಮಾಡಿದ್ದೇನೆ,” ಎಂದು ರಾಶಿದಾ ತಮ್ಮ ಕೆಲಸದ ಬಗ್ಗೆ ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...