UAEನಲ್ಲಿ ನೆಲೆಸಿರುವ ಭಾರತ ಮೂಲದ ಕಲಾವಿದರೊಬ್ಬರು ಮರುಬಳಕೆ ಮಾಡಲಾದ 5000 ಬಟನ್ ಗಳನ್ನು ಬಳಸಿಕೊಂಡು ಮಹಾತ್ಮಾ ಗಾಂಧಿ ಚಿತ್ರವನ್ನು ರಚಿಸಿದ್ದಾರೆ. ಕಳೆದ 29 ವರ್ಷಗಳಿಂದ ಈ ದೇಶದಲ್ಲಿ ನೆಲೆಸಿರುವ ರಶೀದಾ ಅದಿಲ್ ಈ ಕಲಾಕೃತಿಯನ್ನು ಮೂರು ತಿಂಗಳ ಪರಿಶ್ರಮದಿಂದ ರಚಿಸಿದ್ದಾರೆ.
ಶಾರ್ಜಾದಲ್ಲಿರುವ ಕಲಾಶಾಸ್ತ್ರದ ಶಿಕ್ಷಕಿ ತ್ಯಾಜ್ಯ ವಸ್ತುಗಳಿಗೆ ಸುಂದರ ರೂಪ ಕೊಡುವುದರಲ್ಲಿ ಪರಿಣಿತೆಯಾಗಿದ್ದಾರೆ. ತಮ್ಮ ಈ ಸುಂದರ ಕಲಾಕೃತಿಯನ್ನು ರಶೀದಾ ಸ್ವಾತಂತ್ರ‍್ಯೋತ್ಸವಕ್ಕೆ ಅರ್ಪಿಸಿದ್ದಾರೆ.
“ನನ್ನ ತವರು ದೇಶವಾದ ಭಾರತಕ್ಕೆ ನನ್ನ ಈ ಪುಟ್ಟ ಕೊಡುಗೆಗೆಂದು ನನ್ನ ಹೃದಯ ಹಾಗೂ ಆತ್ಮವನ್ನು ಧಾರೆಯೆರೆದಿದ್ದೇನೆ. ಸ್ವಾತಂತ್ರ‍್ಯ ಚಳವಳಿಯಲ್ಲಿ ದಣಿವಿಲ್ಲದೇ ಶ್ರಮಿಸಿದ ಮಹಾತ್ಮಾ ಗಾಂಧಿಯಂಥ ಸ್ವಾತಂತ್ರ‍್ಯ ಹೋರಾಟಗಾರರಿಂದ ಸ್ಪೂರ್ತಿ ಪಡೆದುಕೊಂಡಿದ್ದೇನೆ. ತ್ರಿವರ್ಣದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಮೂಡಿಸಲು ನಾನು ಕಳೆದ ಮೂರು ತಿಂಗಳಿನಿಂದ ಪ್ರತಿನಿತ್ಯ ನಾಲ್ಕು ಗಂಟೆಗಳ ಮಟ್ಟಿಗೆ ಪರಿಶ್ರಮ ಹಾಕುವ ಮೂಲಕ ಕೇಸರಿ, ಹಸಿರು ಹಾಗೂ ಬಿಳಿ ಹಾಗೂ ಕಪ್ಪು ಬಣ್ಣದ ಗುಂಡಿಗಳನ್ನು ಆರಿಸಿ ಬಹಳ ತಾಳ್ಮೆಯಿಂದ ಈ ಕೆಲಸ ಮಾಡಿದ್ದೇನೆ,” ಎಂದು ರಾಶಿದಾ ತಮ್ಮ ಕೆಲಸದ ಬಗ್ಗೆ ವಿವರಿಸಿದ್ದಾರೆ.
https://www.facebook.com/photo.php?fbid=1288432231487776&set=a.125550154442662&type=3
https://www.facebook.com/photo.php?fbid=1288432288154437&set=a.125550154442662&type=3