ಈಗಿನ ಕಾಲ ಎಷ್ಟು ಮುಂದುವರಿದಿದೆ ಅಂದರೆ ಮನೆಯಲ್ಲಿ ಕೂತುಕೊಂಡೇ ಆಹಾರ ಪದಾರ್ಥ, ಬಟ್ಟೆ, ದಿನಸಿ ವಸ್ತುಗಳು, ಔಷಧಿಗಳನ್ನೆಲ್ಲಾ ಆರ್ಡರ್ ಮಾಡಿಬಿಡಬಹುದು. ಹೋಮ್ ಡೆಲಿವರಿ ಇಲ್ಲದೇ ಬದುಕೋದು ಹೇಗೆ ಎಂಬಷ್ಟರ ಮಟ್ಟಿಗೆ ನಾವು ಇದಕ್ಕೆ ಒಗ್ಗಿ ಹೋಗಿದ್ದೇವೆ.
ಆದರೆ ಇದೀಗ ಕೊರೊನಾ ವೈರಸ್ ತಾಂಡವ ವಿಶ್ವದಲ್ಲಿ ಇರೋದ್ರಿಂದ ಜನರು ಡೆಲಿವರಿ ಬಾಯ್ಗಳಿಂದ ಪಾರ್ಸೆಲ್ ತೆಗೆದುಕೊಳ್ಳೋಕೆ ಭಯಪಡ್ತಾರೆ. ಆದರೆ ಇದಕ್ಕೂ ಕೂಡ ಸಿಂಗಾಪುರದ ಕಂಪನಿಯೊಂದು ಹೊಸ ಐಡಿಯಾ ಹುಡುಕಿದೆ. ಇಲ್ಲಿ ರೊಬೊಟ್ಗಳು ಹೋಂ ಡೆಲಿವರಿಯನ್ನ ಕೊಡುತ್ತಿವೆ.
ಕ್ಯಾಮೆಲ್ಲೊ ಎಂಬ ಹೆಸರಿನ ಈ ರೊಬೋಟ್ಗಳನ್ನ ಓಟಿಎಸ್ಎಬಡಬ್ಲೂ ಎಂಬ ಕಂಪನಿ ತಯಾರಿಸಿದೆ. ಈ ರೋಬೋಟ್ಗಳು ಮೊದಲನೇ ವರ್ಷದ ಪ್ರಾಯೋಗಿಕ ಪರೀಕ್ಷೆ ಪ್ರಯುಕ್ತ 700 ಮನೆಗಳಿಗೆ ಡೆಲಿವರಿಯನ್ನ ನೀಡುತ್ತಿವೆ.
ಕ್ಯಾಮರಾ, ತ್ರಿಡಿ ಸೆನ್ಸಾರ್ ಹಾಗೂ 2 ಕಂಪಾರ್ಟ್ಮೆಂಟ್ಗಳನ್ನ ಈ ರೊಬೋಟ್ಗಳು ಹೊಂದಿವೆ. 20 ಕೆಜಿ ವಸ್ತುವನ್ನ ಹೊರುವ ಸಾಮರ್ಥ್ಯ ಇರುವ ಈ ರೊಬೋಟ್ಗಳು ದಿನಕ್ಕೆ ನಾಲ್ಕರಿಂದ ಐದು ಡೆಲಿವರಿ ಮಾಡುತ್ತವೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಒಟಿಎಸ್ಎಡಬ್ಲೂ ಚೀಫ್ ಎಕ್ಸಿಕ್ಯೂಟಿವ್ ಲಿಂಗ್ ಟಿಂಗ್ ಮಿಂಗ್, ಕೊರೊನಾದಿಂದಾಗಿ ಈಗ ಎಲ್ಲರೂ ಸಂಪರ್ಕರಹಿತ ಸೇವೆಯನ್ನ ಬಯಸುತ್ತಾರೆ. ಇದೇ ಉದ್ದೇಶವನ್ನ ಗಮನದಲ್ಲಿ ಇಟ್ಟುಕೊಂಡು ಇಂತಹ ರೊಬೋಟ್ಗಳನ್ನ ತಯಾರಿಸಿದ್ದೇವೆ ಎಂದು ಹೇಳಿದ್ರು.