ಕೋವಿಡ್-19 ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿದ್ದ ರೆಸ್ಟಾರಂಟ್ ಗಳು ಎಲ್ಲೆಡೆ ನಿಧಾನವಾಗಿ ತೆರೆದುಕೊಳ್ಳುತ್ತಿದ್ದರೂ ಸಹ ಇನ್ನೂ ಸಂಪೂರ್ಣವಾಗಿ ವ್ಯಾಪಾರ ಕಳೆಗಟ್ಟಲು ತಿಂಗಳುಗಳೇ ಬೇಕು.
ಇದೇ ವೇಳೆ, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಿರುವ ರೆಸ್ಟಾರಂಟ್‌ಗಳು ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಿ ಕ್ರಮಗಳನ್ನು ಮುನ್ನೆಲೆಗೆ ತರುತ್ತಿವೆ.
ಕಳೆದ ತಿಂಗಳು ವಿಯೆಟ್ನಾಂ ರೆಸ್ಟಾರಂಟ್ ಒಂದು ದೊಡ್ಡ ಪಾಂಡಾಗಳನ್ನು ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಗ್ರಾಹಕರನ್ನು ಉತ್ತೇಜಿಸುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ಬಾರಿ ಪ್ಯಾರಿಸ್‌ನ ಕೆಫೆ ಒಂದರಲ್ಲಿ, ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಟೆಡ್ಡಿ ಬೇರ್ ಗೊಂಬೆಗಳನ್ನು ಬಳಸಲಾಗುತ್ತಿದೆ.
https://www.facebook.com/permalink.php?story_fbid=2863758250328350&id=302537903117077