alex Certify ಅನ್ಯರೊಂದಿಗಿನ ಲೈಂಗಿಕ ಚಟುವಟಿಕೆಗೆ ನಿರ್ಬಂಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ಯರೊಂದಿಗಿನ ಲೈಂಗಿಕ ಚಟುವಟಿಕೆಗೆ ನಿರ್ಬಂಧ…!

ಕೊರೋನಾ ಹಾವಳಿ ಒಂದೆರಡು ರೀತಿಯದ್ದಲ್ಲ. ಆರ್ಥಿಕ ಪರಿಸ್ಥಿತಿ ಬುಡಮೇಲು ಮಾಡಿದ ಈ ಸೋಂಕು ಇದೀಗ ಸಾಮಾಜಿಕವಾಗಿಯೂ ಒಂದಷ್ಟು ಬದಲಾವಣೆಗೆ ಕಾರಣವಾಗುತ್ತಿದೆ. ಇದೀಗ ಅನ್ಯರ ಮನೆಯಲ್ಲಿ ‘ಅನ್ಯೋನ್ಯತೆ’ಗೂ ತಡೆ ಹಾಕುತ್ತಿದೆ.

ಇಂಗ್ಲೆಂಡ್ ನಲ್ಲಿ ಜಾರಿಯಾದ ಹೊಸ ಕೋವಿಡ್-19 ಕಾನೂನಿನ ಪ್ರಕಾರ, ಬೇರೆ ಮನೆಯ ವ್ಯಕ್ತಿಯೊಂದಿಗೆ ತನ್ನ ಮನೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಕಾನೂನು ಬಾಹಿರವಾಗುತ್ತದೆ.

ಕೊರೋನಾ ನಿಯಂತ್ರಿಸಲು ಜೂನ್ 1ರಿಂದ ಜಾರಿಗೆ ಬಂದ ಹೊಸ ಕ್ರಮಗಳಂತೆ ಜನರು ತಮ್ಮ ಮನೆಯಲ್ಲಿ ಬೇರೆ ಮನೆಯವರ ಜತೆ ‘ಖಾಸಗಿಯಾಗಿ’ ಬೆರೆಯುವಂತಿಲ್ಲ. ಇಂಗ್ಲೆಂಡ್ ಸರ್ಕಾರದ ಈ ನಿಯಮವನ್ನು ಈಗ ಜನರು ಪ್ರಶ್ನಿಸಲಾರಂಭಿಸಿದ್ದಾರೆ. ಟ್ವಿಟರ್ ಫೇಸ್ಬುಕ್ ಹಾಗೂ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲಿನ ಜನರು ಸರ್ಕಾರದ ಕ್ರಮವನ್ನು ಅಪಹಾಸ್ಯ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...