
ಡಾನ್ ಜ್ಯೂನಿಯರ್ ಮೊಬೈಲ್ ಫೋನ್ನಲ್ಲಿ ಚಿತ್ರಿಕರಿಸಲಾದ ಈ ವಿಡಿಯೋ ಟ್ರಂಪ್ ಭಾಷಣಕ್ಕೂ ಮುನ್ನ ಸೆರೆ ಹಿಡಿದಿದ್ದೋ ಇಲ್ಲವೇ ನಂತರದಲ್ಲೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಡೊನಾಲ್ಡ್ ಟ್ರಂಪ್ ಭಾಷಣ ಮಾಡಿದ ಕೆಲವೇ ಗಂಟೆಗಳ ಬಳಿಕ ಕ್ಯಾಪಿಟಲ್ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ್ದರು. ಟ್ರಂಪ್ಗಿಂತ ಏಳು ಮಿಲಿಯನ್ ಅಧಿಕ ಮತ ಗಳಿಸಿರುವ ಜೋ ಬಿಡೆನ್ರನ್ನ ಅಧಿಕೃತವಾಗಿ ಕಾಂಗ್ರೆಸ್ ಘೋಷಣೆ ಮಾಡುವ ಮುನ್ನ ಈ ಹಿಂಸಾಚಾರ ನಡೆದಿದೆ.
ಟ್ರಂಪ್ ಜ್ಯೂನಿಯರ್ ಅದ್ಭುತ ದೇಶಭಕ್ತರಿಗೆ ಧನ್ಯವಾದ ಎಂದು ಹೇಳುವ ಮೂಲಕ ವಿಡಿಯೋ ಆರಂಭವಾಗುತ್ತೆ. ಹಿಂಸಾಚಾರದಲ್ಲಿ ಭಾಗಿಯಾದವರನ್ನ ದೇಶಭಕ್ತರು ಎಂದು ಕರೆಯುವ ಮೂಲಕ ಈ ಹಿಂದೆ ಇವಾಂಕಾ ಭಾರೀ ವಿರೋಧವನ್ನ ಎದುರಿಸಿದ್ದರು. ಬಳಿಕ ಅವರು ತಮ್ಮ ಟ್ವೀಟ್ನ್ನೇ ಅಳಿಸಿಹಾಕಿದ್ದರು. ಈಗಲೂ ಕೂಡ ಈ ವಿಡಿಯೋ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.
https://twitter.com/i/status/1347250902785093639