ಎಲ್ಲೆಡೆ ಕೊರೊನಾ ವೈರಸ್ಗೆ ಲಸಿಕೆ ಯಾವುದು ಅನ್ನೋದ್ರ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಕೆನಡಾದಲ್ಲಿ ಮಾತ್ರ ಸೈಕೆಡೆಲಿಕ್ ಅಣಬೆಗಳು ದೊಡ್ಡ ಚರ್ಚಾ ವಿಷಯವಾಗಿ ಹೊರಹೊಮ್ಮಿದೆ.
ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಿಯ ರೂಪದಲ್ಲಿ ಸೈಕೆಡೆಲಿಕ್ ಅಣಬೆಗಳನ್ನ ನೀಡುವಂತೆ ಕೆನಡಾ ಸರ್ಕಾರ ಅನುಮತಿ ನೀಡಿದೆ.
ವಿಕ್ಟೋರಿಯಾ ಬಿಸಿಯಲ್ಲಿ ವಾಸಿಸುತ್ತಿರುವ 67 ವರ್ಷದ ಮಹಿಳೆಗೆ ಔಷಧಿ ರೂಪದಲ್ಲಿ ಸೈಕೆಡೆಲಿಕ್ ಅಣಬೆಗಳನ್ನ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.
ಆಘಾತದಿಂದ ಖಿನ್ನತೆಗೆ ಒಳಗಾಗಿದ್ದ ಈ ವೃದ್ಧೆಗೆ ಈ ಅಣಬೆಯನ್ನ ಚಿಕಿತ್ಸೆ ರೂಪದಲ್ಲಿ ನೀಡಲಾಗುತ್ತಿದೆ. ಸೈಕೆಡಲಿಕ್ ಅಣಬೆಗಳು ಸೈಲೋಸಿಬಿನ್ನ್ನು ಒಳಗೊಂಡಿರೋದರಿಂದ ಕೆನಡಾದಲ್ಲಿ ಇದರ ಉತ್ಪಾದನೆ ಹಾಗೂ ಮಾರಾಟ ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ಕೆನಡಾ ಸರ್ಕಾರ ಸೈಕೆಡಲಿಕ್ ಅಣಬೆಗೆ ಕೆಲ ವಿನಾಯಿತಿ ನೀಡಿದೆ.