alex Certify ಬೆಚ್ಚಿಬೀಳಿಸುವಂತಿದೆ ಟಿಕ್ ಟಾಕ್ ನಲ್ಲಿ ಫೇಮಸ್​ ಆಗಬೇಕು ಅಂತಾ ಈತ ಮಾಡಿದ ಕೃತ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಟಿಕ್ ಟಾಕ್ ನಲ್ಲಿ ಫೇಮಸ್​ ಆಗಬೇಕು ಅಂತಾ ಈತ ಮಾಡಿದ ಕೃತ್ಯ…!

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಬೇಕು ಅಂದರೆ ಜನರು ಏನ್​ ಬೇಕಾದ್ರೂ ಮಾಡೋಕೆ ರೆಡಿ ಇರ್ತಾರೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ. ಟಿಕ್​ ಟಾಕರ್​ ಆಗಿದ್ದ ವ್ಯಕ್ತಿಯೊಬ್ಬ ತನ್ನ ಫಾಲೋವರ್​ಗಳನ್ನ ಮೆಚ್ಚಿಸಬೇಕು ಎಂಬ ಕಾರಣಕ್ಕೆ ಭಯಾನಕ ಸಾಹಸವೊಂದಕ್ಕೆ ಕೈ ಹಾಕಿದ್ದಾನೆ.

ಸಿಂಗಾಪುರದ ಮೃಗಾಲಯಕ್ಕೆ ಬಂದಿದ್ದ ಟಿಕ್​ಟಾಕರ್​ ಒಬ್ಬ ಘೇಂಡಾಮೃಗಗಳ ಸಮೀಪದಲ್ಲೇ ನಿಂತು ಹಿಮ್ಮುಖವಾಗಿ ಹಾರಿದ್ದಾನೆ. ಘೇಂಡಾಮೃಗಗಳು ಈತನ ಕಡೆಗೆ ಲಕ್ಷ್ಯ ನೀಡದ ಕಾರಣ ಈತ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಲರ್ಟ್ ಆದ ಸಿಂಗಾಪುರ ವನ್ಯಜೀವಿ ರಕ್ಷಣಾ ಇಲಾಖೆ ಈತನ ವಿರುದ್ಧ ದೂರನ್ನ ದಾಖಲಿಸಿದೆ . ಅಲ್ಲದೇ ಇನ್ಸ್​ಟಾಗ್ರಾಂ ಪೋಸ್ಟ್ ಮೂಲಕ ಈ ಘಟನೆಯ ಬಗ್ಗೆ ಆತಂಕ ಹೊರಹಾಕಿದೆ. ತನ್ನ ಅಧಿಕೃತ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಿರುವ ಸಿಂಗಾಪುರ ವನ್ಯಜೀವಿ ರಕ್ಷಣಾ ಇಲಾಖೆ ಇದೊಂದು ಬೇಜವಾಬ್ದಾರಿ ಕೃತ್ಯ ಎಂದು ಖಂಡಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...