
ನೀವು ಸಾಮಾಜಿಕ ಜಾಲತಾಣಗಳಲ್ಲಿ ಅವಳಿ ಜವಳಿಗಳ ಕುರಿತಾದ ಸಾಕಷ್ಟು ಸುದ್ದಿಗಳನ್ನ ಓದಿರ್ತೀರಾ. ಆದರೆ ಬ್ರೆಜಿಲ್ನ ಮಯ್ಲಾ ಹಾಗೂ ಸೋಫಿಯಾ ಎಂಬ ಹೆಸರಿನ ಅವಳಿಗಳ ಈ ಕತೆಯನ್ನ ನೀವು ಹಿಂದೆಂದೂ ಕೇಳಿರೋಕೆ ಸಾಧ್ಯವೇ ಇಲ್ಲ .
19 ವರ್ಷದ ತದ್ರೂಪಿ ಅವಳಿಗಳಾದ ಈ ಸಹೋದರರು ಚಿಕ್ಕಂದಿನಿಂದಲೂ ಎಲ್ಲಾ ಕೆಲಸಗಳನ್ನೂ ಒಟ್ಟಿಗೆ ಮಾಡ್ತಾನೇ ಬಂದಿದ್ದಾರೆ. ಇದೀಗ ಈ ಅವಳಿ ಸಹೋದರರು ಲಿಂಗ ಪರಿವರ್ತನೆಯನ್ನೂ ಒಟ್ಟಿಗೇ ಮಾಡಿಸಿಕೊಂಡಿದ್ದಾರೆ.
ಟಿವಿ ನೇರಪ್ರಸಾರದ ವೇಳೆಯೇ ನಡೆಯಿತು ಅಚ್ಚರಿ ಘಟನೆ
ಈ ಮೂಲಕ ಒಟ್ಟಿಗೆ ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾದ ವಿಶ್ವದ ಮೊದಲ ಅವಳಿ ಜವಳಿಗಳು ಎಂಬ ಖ್ಯಾತಿಗೆ ಈ ಸಹೋದರರು ಪಾತ್ರರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ವಿಶ್ವದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಇವರಿಬ್ಬರು ಜನಿಸುವಾಗ ಪುರುಷರಾಗಿದ್ದು ಲಿಂಗ ಪರಿವರ್ತನೆ ಚಿಕಿತ್ಸೆ ಬಳಿಕ ಹೆಣ್ಣಾಗಿ ಮಾರ್ಪಾಡಾಗಿದ್ದಾರೆ ಎಂದು ಬ್ರೆಜಿಲ್ನ ಲಿಂಗ ಪರಿವರ್ತನೆ ಕೇಂದ್ರದ ವೈದ್ಯ ಡಾ. ಕೋಸ್ ಕಾರ್ಲೋಸ್ ಮಾಹಿತಿ ನೀಡಿದ್ದಾರೆ.