ಗೂಗಲ್ ಎಂಬ ಸರ್ಚ್ ಇಂಜಿನ್ ಇಂದು ಮಾನವನ ಅಗತ್ಯಗಳಲ್ಲೊಂದಾಗಿಬಿಟ್ಟಿದೆ. ಆಹಾರ, ಬಟ್ಟೆಗಳಂತೆ ಗೂಗಲ್ ಇಲ್ಲದೇ ಇದ್ದರೂ ಬದುಕಿಲ್ಲ ಎನ್ನುವಷ್ಟರಮಟ್ಟಿಗೆ ನಾವಿದ್ದೇವೆ. ಗೂಗಲ್ ರಹಿತ ಜೀವನವನ್ನು ಊಹಿಸಲೂ ಅಸಾಧ್ಯ ಪರಿಸ್ಥಿತಿ ಇದೆ.
ಈ ನಡುವೆ ಆಸ್ಟ್ರೇಲಿಯಾ ಸರ್ಕಾರ ಹಾಗೂ ಗೂಗಲ್ ನಡುವೆ ಶೀತಲ ಸಮರ ಪ್ರಾರಂಭವಾಗಿದೆ. ಇದರಿಂದ ಅಲ್ಲಿನ ಜನ ಗೂಗಲ್ ರಹಿತ ಜೀವನ ಊಹಿಸಿಕೊಳ್ಳುವಂತಾಗಿದೆ.
ಗಮನಿಸಿ: ಇಎಂಐ ಮೂಲಕವೂ ಪಾವತಿಸಬಹುದು ʼಆರೋಗ್ಯ ವಿಮೆʼ
ದೇಶದ ಶೇ.95 ರಷ್ಟು ಹುಡುಕಾಟಗಳು ಗೂಗಲ್ ಮೂಲಕವೇ ನಡೆಯುತ್ತವೆ.
ದೇಶದಿಂದ ಮುದ್ರಣವಾಗುವ ವೆಬ್ ಅವತರಣಿಕೆಗಳಿಗೆ ತಮಗೆ ಶುಲ್ಕ ಪಾವತಿಸುವಂತೆ ಆಸ್ಟ್ರೇಲಿಯಾ ಸರ್ಕಾರ ಗೂಗಲ್ ಗೆ ಹೇಳಿದೆ. ಆದರೆ, ಗೂಗಲ್ ಅದಕ್ಕೆ ವಿರೋಧ ವ್ಯಕ್ತಪಡಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಲ್ಲಿ ಯಾವ ಪರಿಸ್ಥಿತಿ ಎದುರಾಗಲಿದೆಯೋ ಎಂಬ ಚಿಂತೆ ತಜ್ಞರನ್ನು ಕಾಡುತ್ತಿದೆ.