ಮದುವೆ ದಿನ ಅನ್ನೋದು ಎಲ್ಲರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನವಾಗಿದೆ. ಈ ದಿನವನ್ನ ನೀವು ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ.
57 ವರ್ಷದ ರಿಚರ್ಡ್ ಪುರ್ಸೆಲ್ ಕೆಲ ಸಮಯದ ಹಿಂದಷ್ಟೇ ಗೆಳತಿ ವಿಕ್ಟೋರಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಅಂದ್ರೇನೆ ವಿಶೇಷ ಆದರೆ ರಿಚರ್ಡ್ಗೆ ಮಾತ್ರ ಈ ದಿನ ಇನ್ನಷ್ಟು ವಿಶೇಷವಾಗಿ ಮಾರ್ಪಾಡಾಯ್ತು.
ಫುಟ್ಬಾಲ್ ಬೆಟ್ನಲ್ಲಿ ರಿಚರ್ಡ್ ಬರೋಬ್ಬರಿ 9.89 ಲಕ್ಷ ರೂಪಾಯಿ ಗೆದ್ದಿದ್ದಾರೆ. ಎಲ್ಲಾ ಮಧುಮಕ್ಕಳಂತೆ ರಿಚರ್ಡ್ ಕೂಡ ಮದುವೆ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಅವರು ತಾವು ಬೆಟ್ಟಿಂಗ್ ಕಟ್ಟಿದ್ದೇನೆ ಎಂಬ ವಿಚಾರವನ್ನೇ ಮರೆತುಬಿಟ್ಟಿದ್ದರು.
ಆದರೆ ಈ ಬಹುಮಾನ ಅವರಿಗೆ ಸಿಕ್ಕಿದೆ ಅನ್ನೋದು ತಿಳೀತಾ ಇದ್ದಂತೆ ರಿಚರ್ಡ್ ಸಂತಸ ಮುಗಿಲುಮುಟ್ಟಿದೆ.