alex Certify ಕೊರೊನಾ ಸೋಂಕಿತನಿಗೆ ವೈದ್ಯನ ಸಾಂತ್ವನ: ವೈರಲ್​ ಆಯ್ತು ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತನಿಗೆ ವೈದ್ಯನ ಸಾಂತ್ವನ: ವೈರಲ್​ ಆಯ್ತು ಫೋಟೋ

ಕೊರೊನಾ ವೈರಸ್​​ ಜನರಲ್ಲಿ ಭಯ ಹಾಗೂ ಆತಂಕವನ್ನ ಹೆಚ್ಚು ಮಾಡುತ್ತಲೇ ಇದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಹೃದಯ ವಿದ್ರಾವಕ ಘಟನೆಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವ್ಹೀಲ್​ ಚೇರ್​ ಮೇಲೆ ಕೂತು ಸೂರ್ಯಾಸ್ತ ನೋಡುತ್ತಿರುವ ರೋಗಿಗಳು, ವಯಸ್ಸಾದ ದಂಪತಿ ಆಸ್ಪತ್ರೆ ಬೆಡ್​ ಮೇಲೆ ಮಲಗಿದ್ದು ಈ ರೀತಿಯ ಸಾಕಷ್ಟು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸೌಂಡ್​ ಮಾಡ್ತಿದೆ.

ಟೆಕ್ಸಾಸ್​​ನ ಹೂಸ್ಟನ್​​ನಲ್ಲಿ ಕೋವಿಡ್​ ರೋಗಿಯ ದುಸ್ಥಿತಿಯನ್ನ ಸಾರುವ ಹೃದಯ ವಿದ್ರಾವಕ ಕ್ಷಣದ ಫೋಟೋ ಒಂದನ್ನ ಕ್ಲಿಕ್ಕಿಸಲಾಗಿದೆ.

ಕೊರೊನಾ ವೈರಸ್​ ವಾರ್ಡ್​ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಜೋಸೆಫ್​ ವರಣ್​, ಒಂಟಿ ಎಂದು ಮರುಗುತ್ತಿದ್ದ ಸೋಂಕಿತನಿಗೆ ಸಾಂತ್ವನ ಹೇಳುತ್ತಿರುವ ದೃಶ್ಯ ಇದಾಗಿದೆ. ಆಸ್ಪತ್ರೆಯಲ್ಲಿದ್ದ ವೃದ್ಧ ತನ್ನ ಪತ್ನಿಯನ್ನ ನೆನೆಸಿಕೊಂಡು ದುಃಖಿತನಾಗಿದ್ದ ವೇಳೆ ವೈದ್ಯ ಆತನನ್ನ ತಬ್ಬಿಕೊಂಡು ಸಮಾಧಾನ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...