ಇಥಿಯೋಪಿಯಾದ ಒಂದು ಪವಿತ್ರ ಆರ್ಕ್ನ್ನು ರಕ್ಷಣೆ ಮಾಡಲಿಕ್ಕಾಗಿ ನೂರಾರು ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ಆರ್ಕ್ ಇಥಿಯೋಪಿಯಾದ ಟೈಗ್ರೆ ಕ್ಷೇತ್ರದ ಸೇಂಟ್ ಮೇರಿ ಚರ್ಚ್ನ ರಕ್ಷಣಾ ಸಿಬ್ಬಂದಿಯ ಸಮ್ಮುಖದಲ್ಲಿ ಸುರಕ್ಷಿತವಾಗಿದೆ ಹಾಗೂ ಕ್ರಿಶ್ಚಿಯನ್ ಧರ್ಮದಲ್ಲಿ ಇದನ್ನ ತುಂಬಾ ಪವಿತ್ರ ಎಂದು ನಂಬಲಾಗಿದೆ. ರಿಪೋರ್ಟ್ಗಳ ಅನುಸಾರ, ಹೆಚ್ಚು ಕಡಿಮೆ 800 ಮಂದಿ ಸೇಂಟ್ ಮೇರಿ ಚರ್ಚ್ನ ಸುತ್ತ ಮುತ್ತ ಜೀವ ಬಿಟ್ಟಿದ್ದಾರೆ. ಹಾಗೂ ಬಹಳ ದಿನಗಳವರೆಗೂ ರಸ್ತೆಗಳಲ್ಲಿ ಇವರ ಶವಗಳು ಬಿದ್ದಿದ್ದವು ಎನ್ನಲಾಗಿದೆ.
ಗೇಟೂ ಮಾಕ್ ಹೆಸರಿನ ಒಂದು ಯೂನಿವರ್ಸಿಟಿ ಉಪನ್ಯಾಸಕ ಈ ಗಂಭೀರ ಘಟನೆಯನ್ನ ವಿವರಿಸಿದ್ದಾರೆ. ಅವರು ಟೈಮ್ಸ್ ವೆಬ್ಸೈಟ್ ಜೊತೆ ಮಾತನಾಡುತ್ತಾ, ಜನರು ಗನ್ ಫೈರಿಂಗ್ ಶಬ್ದ ಕೇಳುತ್ತಿದ್ದಂತೆಯೇ ಚರ್ಚ್ ಕಡೆಗೆ ಓಡಲು ಆರಂಭಿಸಿದರು. ಅಲ್ಲಿರುವ ಪಾದ್ರಿಗಳನ್ನ ಹಾಗೂ ಈ ಪವಿತ್ರ ಆರ್ಕ್ನ ರಕ್ಷಣೆಗಾಗಿ ಚರ್ಚ್ ಕಡೆ ಓಡಿದ್ದರು. ಈ ಕಾರಣದಿಂದಲೇ ಇವರೆಲ್ಲ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆ ನವೆಂಬರ್ ತಿಂಗಳಲ್ಲಿ ನಡೆದಿದೆ. ಆದರೆ ಆ ಸಮಯದಲ್ಲಿ ಇಥಿಯೋಪಿಯಾದಲ್ಲಿ ಪಿಎಂ ಎಬೆ ಅಹಮದ್ ಇಂಟರ್ನೆಟ್ ಹಾಗೂ ಮೊಬೈಲ್ ನೆಟ್ವರ್ಕ್ ಸೇವೆಯನ್ನ ಬಂದ್ ಮಾಡಿಸಿದ್ದರು. ಇದಾದ ಬಳಿಕ ಇಥಿಯೋಪಿಯಾಗೆ ಸಂಪೂರ್ಣ ವಿಶ್ವದ ಸಂಪರ್ಕ ಕಡಿತವಾಯ್ತು. ಆದರೆ ಈಗ ಇಂಟರ್ನೆಟ್ ಸಹಜ ಸ್ಥಿತಿಗೆ ಬಂದಿದೆ.
ಅಹಮದ್ ಅಧಿಕಾರಕ್ಕೆ ಬರೋದಕ್ಕೂ ಮುನ್ನ ಇಥಿಯೋಪಿಯಾದಲ್ಲಿ ಟೈಗ್ರೆ ಪೀಪಲ್ಸ್ ಲಿಬರೇಷನ್ ಆರ್ಮಿ 27 ವರ್ಷಗಳ ಕಾಲ ಆಡಳಿತವನ್ನ ನಡೆಸಿತ್ತು. ಟೈಗ್ರೆ ಪ್ರದೇಶದ ಜನಸಂಖ್ಯೆ ಇಡೀ ದೇಶದ ಜನಸಂಖ್ಯೆಯ ಶೇಕಡಾ 6ರಷ್ಟಿದ್ದರೂ , ಇವರ ಅಧಿಕಾರದ ಅವಧಿಯಲ್ಲಿ ದೊಡ್ಡ ಪ್ರಮಾಣ ಭ್ರಷ್ಟಾಚಾರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದ್ದರೂ ಆ ಪ್ರದೇಶದ ರಾಷ್ಟ್ರ ರಾಜಕಾರಣದಲ್ಲಿ ಟೈಗ್ರೆ ಪೀಪಲ್ಸ್ ಲಿಬರೇಷನ್ ಪ್ರಾಬಲ್ಯ ಹೊಂದಿದೆ. ಇದು ಟಿಪಿಎಲ್ಎಫ್ ಸರ್ಕಾರವನ್ನ ಜನಪ್ರಿಯಗೊಳಿಸಲಿಲ್ಲ ಹಾಗೂ 2018ರಲ್ಲಿ ಅಹಮದ್ ಅಧಿಕಾರವನ್ನ ಅಲಂಕರಿಸಿದ್ರು.
ಟೈಗ್ರೆ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಬಳಿಕ ಪ್ರಧಾನಿ ಎಬೆ ಅಹಮದ್ ಈ ಪ್ರದೇಶದ ಮೇಲೆ ಕ್ರಮ ಕೈಗೊಳ್ಳುವಂತೆ ಸೇನೆಗೆ ಆದೇಶ ನೀಡಿದ್ರು. ಪ್ರಧಾನಿ ಆದೇಶದ ಬಳಿಕ ಟೈಗ್ರೆ ಪ್ರದೇಶದ ಮುಖ್ಯ ರಾಜಕೀಯ ಪಕ್ಷವು ಸೈನ್ಯದ ಉತ್ತರ ಕಮಾಂಡ್ ಹುದ್ದೆಯನ್ನ ಆಕ್ರಮಿಸಿಕೊಳ್ಳೋಕೆ ಅಲ್ಲಿನ ಪಡೆಗಳಿಗೆ ಆದೇಶ ನೀಡಿತು. ಸ್ಥಳೀಯ ಪಡೆಗಳು ಸೈನಿಕರನ್ನ ಬಂಧಿಸಿದರು. ಅಂದಿನಿಂದ ಈ ಪ್ರದೇಶದಲ್ಲಿ ಯುದ್ಧದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಕೊರೊನಾ ಅವಧಿಯಲ್ಲಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.