alex Certify ಈ ಕಾರ್ಯಕ್ಕೆ ಬಳಸಲಾಗುತ್ತಂತೆ ಮಾನವನ ಮೂತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರ್ಯಕ್ಕೆ ಬಳಸಲಾಗುತ್ತಂತೆ ಮಾನವನ ಮೂತ್ರ…!

ಮಾನವನ ಮೂತ್ರದ ಪ್ರಯೋಜನಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದರೆ ಅಚ್ಚರಿಯ ಫಲಿತಾಂಶವನ್ನು ಕಾಣಬಹುದು. ಅನೇಕ ತಜ್ಞರು ಮಾನವನ ಮೂತ್ರದ ಬಳಕೆ ಕುರಿತಂತೆ ವ್ಯಾಪಕವಾಗಿ ಮಾತನಾಡಿರುವುದು ಅಂತರಜಾಲದಲ್ಲಿ ದಾಖಲಾಗಿದೆ.

ಗಾಯ, ಮೊಡವೆ, ಅಲರ್ಜಿಗಳಿಗೆ ಮೂತ್ರವು ಚಿಕಿತ್ಸಕ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಅಂಶಗಳನ್ನು ಇಲ್ಲಿ ನೋಡಬಹುದು. ಆದರೆ ಇಂತಹ ಪ್ರಸ್ತಾಪಗಳನ್ನು ಹಲವರು ನಿರಾಕರಿಸಿದ್ದಾರೆ.

ಇದೀಗ ಚಂದ್ರನ ಮೇಲೆ ಪ್ರಯೋಗಕ್ಕೆ ಮಾನವನ ಮೂತ್ರವನ್ನು ಬಳಸಲಾಗುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಚಂದ್ರನ ಮೇಲೆ ಕಾಂಕ್ರೀಟ್ ಮಿಶ್ರಣವನ್ನು ಮಾಡುವುದಕ್ಕೆ ಮಾನವನ ಮೂತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

‘ಭವಿಷ್ಯದ ಚಂದ್ರನ ಮೇಲೆ ನಿವಾಸಿಗಳಿಗೆ ಧನ್ಯವಾದಗಳು, ಒಬ್ಬ ವ್ಯಕ್ತಿಯು ಪ್ರತಿದಿನ ಉತ್ಪಾದಿಸುವ ಒಂದುವರೆ ಲೀಟರ್ ದ್ರವ ತ್ಯಾಜ್ಯವು ಬಾಹ್ಯಾಕಾಶ ಸಂಶೋಧನೆಗೆ ಭರವಸೆಯ ಉಪ ಉತ್ಪನ್ನವಾಗಬಹುದು’ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಮನುಷ್ಯನ ಮೂತ್ರದಲ್ಲಿರುವ ಸಾವಯವ ಸಂಯುಕ್ತವಸ್ತು ಯೂರಿಯಾ ಚಂದ್ರನ ಮೇಲೆ ಕಾಂಕ್ರೀಟ್ ತಯಾರಿಕೆಗೆ ಮಿಶ್ರಣ ಮಾಡಲು ಬಳಕೆಗೆ ಯೋಗ್ಯವಾಗಬಹುದೆಂಬ ಅಭಿಪ್ರಾಯವಿದೆ.

ಚಂದ್ರನ ಮೇಲ್ಮೈ ಮೇಲೆ ದೊರಕುವ ಪೌಡರ್ ರೀತಿಯ ಮಣ್ಣನ್ನು ಬಳಸಿ ಕಾಂಕ್ರೀಟ್ ತಯಾರಿಕೆಯಲ್ಲಿ ಮಿಶ್ರಣಕ್ಕೆ ಯೂರಿಯ ಸಹಾಯ ಮಾಡಬಹುದು ಎನ್ನಲಾಗಿದೆ.

ಒಟ್ಟಾರೆ, ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಭಿಪ್ರಾಯಗಳು ಈಗ ಸಾರ್ವತ್ರಿಕವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...