ಮಾನವರಿಂದ ಪ್ರಾಣಿಗಳಿಗೂ ಕೊರೋನಾ ವೈರಸ್ ಹಬ್ಬುತ್ತಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಿಗೇ ಅಮೆರಿಕದ ಮೃಗಾಲಯಗಳು ಹಾಗೂ ವನ್ಯ ಜೀವಿ ಧಾಮಗಳಲ್ಲಿರುವ ಪ್ರಾಣಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಇತ್ತೀಚೆಗೆ ಮಿಯಾಮಿಯಲ್ಲಿ 196 ಕೆಜಿ ತೂಕದ ಗೊರೆಲ್ಲಾ ಒಂದಕ್ಕೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಈ ದೈತ್ಯನ ಸ್ಯಾಂಪಲ್ಅ ನ್ನು ವೈದ್ಯರು ಪಡೆಯುತ್ತಿರುವ ಚಿತ್ರಗಳು ಅಂತರ್ಜಾಲದಲ್ಲಿ ಸುದ್ದಿ ಮಾಡುತ್ತಿವೆ.
’ಶಾಂಗೋ’ ಹೆಸರಿನ 31 ವರ್ಷದ ಈ ಗಂಡು ಗೊರಿಲ್ಲಾ ಇಲ್ಲಿನ ಮಿಯಾಮಿ-ಡೇಡ್ ಮೃಗಾಲಯದಲ್ಲಿ ವಾಸಿಸುತ್ತಿದೆ.
https://www.facebook.com/zoomiami/posts/3156912960997652