alex Certify ಆಕಾಶದಿಂದ ಏಕಾಏಕಿ ಬಂದಪ್ಪಳಿಸಿದ ಬೆಂಕಿಯ ಚೆಂಡು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಾಶದಿಂದ ಏಕಾಏಕಿ ಬಂದಪ್ಪಳಿಸಿದ ಬೆಂಕಿಯ ಚೆಂಡು..!

ಆಕಾಶದಿಂದ ಬಂದ ಬೆಂಕಿಯ ಚೆಂಡೊಂದು ಭೂಮಿಗೆ ಬಂದು ಅಪ್ಪಳಿಸಿದ ಘಟನೆ ಚೀನಾದ ಯುಶು ನಗರದಲ್ಲಿ ಬುಧವಾರ ನಡೆದಿದೆ. ಯುಟ್ಯೂಬ್​ನಲ್ಲಿ ವಿಡಿಯೋ ತುಣುಕನ್ನ ಹಂಚಿಕೊಳ್ಳಲಾಗಿದ್ದು ಇದರಲ್ಲಿ ಪ್ರಕಾಶಮಾನವಾದ ಚೆಂಡೊಂದು ಮಿನುಗುತ್ತಿರೋದನ್ನ ಕಾಣಬಹುದಾಗಿದೆ.

ಉಲ್ಕೆಯೆಂದು ಶಂಕಿಸಲಾದ ಈ ಬೆಂಕಿಯ ಚೆಂಡು ವಾಯುವ್ಯ ಚೀನಾದ ಕಿಂಗ್​ ಹೈ ಪ್ರಾಂತ್ಯದ ನಂಗ್ಗಿಯಾನ್​ ಕೌಂಟಿಗೆ ಅಪ್ಪಳಿಸಿದೆ. ಬೆಂಕಿಯ ಚೆಂಡು ಭೂಮಿಗೆ ಬಂದಪ್ಪಳಿಸಿದ ವೇಳೆ ಜೋರಾಗಿ ಶಬ್ದ ಕೇಳಿತ್ತು ಅಂತಾ ಸ್ಥಳೀಯರು ಹೇಳಿದ್ದಾರೆ. ಈ ಘಟನೆ ಡಿಸೆಂಬರ್​ 23ರ ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದೆ.

ಈ ಬೆಂಕಿಯ ಚೆಂಡು ಏನು ಅನ್ನೋದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ. ಆದರೆ ಸ್ಥಳೀಯರು ಮಾತ್ರ ಇದು ಉಲ್ಕೆ ಇರಬಹುದು ಎಂದು ಅಂದಾಜಿಸಿದ್ದಾರೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...