ಆಕಾಶದಿಂದ ಬಂದ ಬೆಂಕಿಯ ಚೆಂಡೊಂದು ಭೂಮಿಗೆ ಬಂದು ಅಪ್ಪಳಿಸಿದ ಘಟನೆ ಚೀನಾದ ಯುಶು ನಗರದಲ್ಲಿ ಬುಧವಾರ ನಡೆದಿದೆ. ಯುಟ್ಯೂಬ್ನಲ್ಲಿ ವಿಡಿಯೋ ತುಣುಕನ್ನ ಹಂಚಿಕೊಳ್ಳಲಾಗಿದ್ದು ಇದರಲ್ಲಿ ಪ್ರಕಾಶಮಾನವಾದ ಚೆಂಡೊಂದು ಮಿನುಗುತ್ತಿರೋದನ್ನ ಕಾಣಬಹುದಾಗಿದೆ.
ಉಲ್ಕೆಯೆಂದು ಶಂಕಿಸಲಾದ ಈ ಬೆಂಕಿಯ ಚೆಂಡು ವಾಯುವ್ಯ ಚೀನಾದ ಕಿಂಗ್ ಹೈ ಪ್ರಾಂತ್ಯದ ನಂಗ್ಗಿಯಾನ್ ಕೌಂಟಿಗೆ ಅಪ್ಪಳಿಸಿದೆ. ಬೆಂಕಿಯ ಚೆಂಡು ಭೂಮಿಗೆ ಬಂದಪ್ಪಳಿಸಿದ ವೇಳೆ ಜೋರಾಗಿ ಶಬ್ದ ಕೇಳಿತ್ತು ಅಂತಾ ಸ್ಥಳೀಯರು ಹೇಳಿದ್ದಾರೆ. ಈ ಘಟನೆ ಡಿಸೆಂಬರ್ 23ರ ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದೆ.
ಈ ಬೆಂಕಿಯ ಚೆಂಡು ಏನು ಅನ್ನೋದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ. ಆದರೆ ಸ್ಥಳೀಯರು ಮಾತ್ರ ಇದು ಉಲ್ಕೆ ಇರಬಹುದು ಎಂದು ಅಂದಾಜಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .