ಇದನ್ನ ಬೇಕಿದ್ದರೆ ನೀವು ಆಮೆ ಸುನಾಮಿ ಎಂದು ಕರೆಯಿರಿ..! ವನ್ಯಜೀವಿ ಸಂರಕ್ಷಣಾ ಸೊಸೈಟಿ ಬ್ರೆಜಿಲ್ನ ಅಮೆಜಾನ್ ನದಿಯ ಉಪನದಿಯಾದ ಪುರುಸ್ ನದಿಯ ಉದ್ದಕ್ಕೂ ಸಂರಕ್ಷಿತ ಪ್ರದೇಶದ ಮರಳು ಕಡಲತೀರದಲ್ಲಿ ದಕ್ಷಿಣ ಅಮೆರಿಕದ ಆಮೆಗಳು ಬರುತ್ತಿರುವ ಅದ್ಭುತ ವಿಡಿಯೋವನ್ನ ಬಿಡುಗಡೆ ಮಾಡಿದೆ.
ಕೇವಲ ಒಂದು ದಿನದಲ್ಲಿ ಸುಮಾರು 71 ಸಾವಿರ ಮರಿಗಳು ಹೊರಹೊಮ್ಮಿದವು ಹಾಗೂ ಕೆಲ ದಿನಗಳ ಬಳಿಕ ಮತ್ತೆ 21 ಸಾವಿರ ಆಮೆಗಳು ಹೊರಹೊಮ್ಮಿವೆ.
ಈ ಅದ್ಭುತ ದೃಶ್ಯ ರಿಸರ್ವಾ ಬಯೋಲಾಜಿಕಾ ಡೋ ಅಬುಫಾರಿಯಲ್ಲಿ ಕಂಡು ಬಂದಿದೆ. ಡಬ್ಲೂ ಸಿಎಸ್ನ ಬ್ರೆಜಿಲ್ ಸಂರಕ್ಷಣಾಧಿಕಾರಿಗಳು ವಯಸ್ಕ ಹೆಣ್ಣು ಆಮೆಗಳ ಮೇಲೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮಾಂಸ ಹಾಗೂ ಮೊಟ್ಟೆಗಳ ಕಳ್ಳ ಸಾಗಣಿಕೆಯನ್ನ ತಡೆಗಟ್ಟುವ ಸಲುವಾಗಿ ಈ ಅಳಿವಿನಂಚಿನಲ್ಲಿರುವ ಪ್ರಬೇಧಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.