ಮಾನವರ ಗರಿಷ್ಠ ಆಯುಷ್ಯ ಎಷ್ಟು ಎಂದು ನಿಖರವಾಗಿ ಹೇಳುವುದೇ ಕಷ್ಟ. ವಿಜ್ಞಾನಿಗಳ ಸಮೂಹವೊಂದು ಮಾನವರ ಗರಿಷ್ಠ ಆಯುಷ್ಯವೆಷ್ಟೆಂದು ಗುರುತು ಮಾಡಿದ್ದಾರೆ.
ಸದ್ಯದ ಮಟ್ಟಿಗೆ, 1997ರಲ್ಲಿ ಮೃತಪಟ್ಟ ಫ್ರಾನ್ಸ್‌ನ ಜಿಯಾನ್ನೆ ಕಾಲ್ಮೆಂಟ್ 122 ವರ್ಷಗಳ ಕಾಲ ಬದುಕಿದ್ದು ಈ ನಿಟ್ಟಿನಲ್ಲಿ ದಾಖಲೆಯಾಗಿದೆ. ವಿಜ್ಞಾನಿಗಳು ನಂಬುವ ಮಾತೊಂದು ನಿಜವಾದಲ್ಲಿ ಕಾಲ್ಮೆಂಟ್‌ರ ದಾಖಲೆ ಮುರಿದು ಬೀಳಲೂಬಹುದು.
ಕಣ್ಮನ ಸೆಳೆಯುವ ಅಮೃತಾಪುರ ‘ಅಮೃತೇಶ್ವರ’ ದೇವಾಲಯ
ನೇಚರ್ ಕಮ್ಯೂನಿಕೇಷನ್ಸ್ ಎಂಬ ವೃತ್ತಪತ್ರಿಕೆಯಲ್ಲಿ ಸಂಶೋಧಕರು ತಮ್ಮ ಅಧ್ಯಯನ ವರದಿಯನ್ನು ಪ್ರಕಟಿಸಿದ್ದಾರೆ. ಬ್ರಿಟನ್ ಹಾಗೂ ಅಮೆರಿಕದಿಂದ ಭಾರೀ ಪ್ರಮಾಣದಲ್ಲಿ ವೈದ್ಯಕೀಯ ದತ್ತಾಂಶ ಸಂಗ್ರಹಿಸಿರುವ ಈ ವಿಜ್ಞಾನಿಗಳು, ಕೃತಕ ಬುದ್ಧಿಮತ್ತೆಯ ನೆರವಿನಿಂದ ಆರೋಗ್ಯ ಹಾಗೂ ಫಿಟ್ನೆಸ್ ಸಂಬಂಧಿ ಮಾಹಿತಿಯನ್ನು ತಾಳೆ ಹಾಕಿ ನೋಡಿ ಈ ಅಂದಾಜು ಮಾಡಿದ್ದಾರೆ.
ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಕಣ್ಣಿನ ಮೇಲಿರಲಿ ಗಮನ
ಮಾನವರು 120-150 ವರ್ಷ ವಯಸ್ಸು ತಲುಪಿದ ಸಂದರ್ಭದಲ್ಲಿ ಅವರ ದೇಹಗಳಲ್ಲಿ ಇರುವ ಪ್ರತಿರೋಧಕ ಶಕ್ತಿ ಸಂಪೂರ್ಣವಾಗಿ ಕಳೆದುಹೋಗಿ ಹುಷಾರು ತಪ್ಪಿದಾಗ ಚೇತರಿಸಿಕೊಳ್ಳುವ ಕ್ಷಮತೆ ಕಳೆದುಕೊಳ್ಳುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.