alex Certify ಅಸ್ವಸ್ಥ ಬಾಲಕಿಯನ್ನ ರಂಜಿಸಲು ಆಸ್ಪತ್ರೆ ಸಿಬ್ಬಂದಿಯಿಂದ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ವಸ್ಥ ಬಾಲಕಿಯನ್ನ ರಂಜಿಸಲು ಆಸ್ಪತ್ರೆ ಸಿಬ್ಬಂದಿಯಿಂದ ನೃತ್ಯ

ಲ್ಯುಕೇಮಿಯಾದಿಂದ ಬಳಲುತ್ತಿರುವ ಪುಟಾಣಿ ಹುಡುಗಿಯನ್ನ ರಂಜಿಸಲಿಕ್ಕೋಸ್ಕರ ಆಸ್ಪತ್ರೆ ಸಿಬ್ಬಂದಿ ನೃತ್ಯ ಪ್ರದರ್ಶನ ಮಾಡಿದ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಲ್ಯುಕೇಮಿಯಾ ಖಾಯಿಲೆಯಿಂದ ಬಳಲುತ್ತಿರುವ ಇಜ್ಜಿ ಎಂಬ ಹೆಸರಿನ ಬಾಲಕಿಯನ್ನ ರಂಜಿಸಲು ಮುಂದಾದ ಡಾ. ಬೇಲಾನ್​ ಕಮಲರಾಜನ್​ ಹಾಗೂ ಎಮ್ಮಾ ಮಾಂಡರ್,​ ಬ್ಯಾಲೆ ನೃತ್ಯ ಪ್ರದರ್ಶನ ಮಾಡಿದ್ದಾರೆ. ವೈದ್ಯರ ನೃತ್ಯ ನೋಡಿದ ಬಾಲಕಿ ತುಂಬಾ ಖುಷಿಯಾಗಿದ್ದಾಳೆ.

2017ರಲ್ಲಿ ಬಾಲಕಿ ಇಜ್ಜಿಗೆ ಲ್ಯುಕೇಮಿಯಾ ಕಾಯಿಲೆ ಇದೆ ಅನ್ನೋದು ದೃಢವಾಗಿತ್ತು. ಇದೀಗ ಆಸ್ಪತ್ರೆಯಲ್ಲಿರುವ ಈ ಬಾಲಕಿ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಬಾಲಕಿಗೆ ಬ್ಯಾಲೆ ನೃತ್ಯ ಅಂದರೆ ತುಂಬಾನೇ ಇಷ್ಟವಂತೆ. ಹೀಗಾಗಿ ಈಕೆಯನ್ನ ಹುರಿದುಂಬಿಸಲಿಕ್ಕೋಸ್ಕರ ಆಸ್ಪತ್ರೆ ಸಿಬ್ಬಂದಿ ಈ ಪ್ರಯತ್ನ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...