alex Certify ಆಸ್ಪತ್ರೆಗೆ ನುಗ್ಗಿದ ಮಂಗನ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ವಿಳಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಗೆ ನುಗ್ಗಿದ ಮಂಗನ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ವಿಳಂಬ

ಟೊಬಾಗೊ: ಆಸ್ಪತ್ರೆ ಆಪರೇಷನ್ ಥಿಯೇಟರ್ ಗೆ ನುಗ್ಗಿದ ಮಂಗವೊಂದರಿಂದ‌ ರೋಗಿಗಳ ಶಸ್ತ್ರ ಚಿಕಿತ್ಸೆ ಮಾಡಲು ಮೂರ್ನಾಲ್ಕು ತಾಸು ವಿಳಂಬವಾದ ಘಟನೆ ವೆಸ್ಟ್ ಇಂಡೀಸ್ ನ ಟ್ರಿನಿಡಾಡ್ ಹಾಗೂ ಟೊಬಾಗೊ ಕೆರೇಬಿಯನ್ ದ್ವೀಪದಲ್ಲಿ ನಡೆದಿದೆ.‌

ಕರೋನಾ ಲಾಕ್‌ಡೌನ್ ನ‌ ಸುಮಾರು ಮೂರು ತಿಂಗಳ ಬಳಿಕ ಪೋರ್ಟ್ ಆಫ್ ಸ್ಪೇನ್‌ ಜನರಲ್ ಹಾಸ್ಪಿಟಲ್ ನಲ್ಲಿ ರೋಗಿಗಳಿಗೆ ಅಗತ್ಯ ಶಸ್ತ್ರ ಚಿಕಿತ್ಸೆಗೆ ತಯಾರಿ ನಡೆಸಲಾಗಿತ್ತು.‌ ಈ ವೇಳೆ ಮಂಗವೊಂದು ಥಿಯೇಟರ್ ಒಳಗೆ ನುಗ್ಗಿ ಮಂಗಾಟ ನಡೆಸಿದ್ದರಿಂದ ಚಿಕಿತ್ಸೆ ವಿಳಂಬವಾಗಿತ್ತು.

ಮಂಗ ಆಸ್ಪತ್ರೆಯ ಶೆಲ್ಫ್ ಮೇಲೆ ಓಡಾಡುತ್ತಿರುವ ವಿಡಿಯೋ‌ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಆ ಸಮಯದಲ್ಲಿ ಒಂದು ದೊಡ್ಡ ಹಾವೂ ಆಸ್ಪತ್ರೆ ಕಂಪೌಂಡ್ ನಲ್ಲಿ ಕಂಡುಬಂತು ಎಂದು ಜಾಲತಾಣದಲ್ಲಿ ದಾರಿ ತಪ್ಪಿಸುವ ಮಾಹಿತಿ ನೀಡಲಾಗಿದೆ.

“ಮಂಗ ಹಾಗೂ ಒಂದು ದೊಡ್ಡ ಹಾವು ಪೋಸ್ಟ್ ಆಫ್ ಸ್ಪೇನ್‌ಜನರಲ್‌ ಹಾಸ್ಪಿಟಲ್ ನಲ್ಲಿ‌ ನಿನ್ನೆ ಕಂಡುಬಂತು” ಎಂದು ವಿಡಿಯೋಕ್ಕೆ ಕ್ಯಾಪ್ಶನ್ ನೀಡಲಾಗಿದೆ.

ಹಾವು ಬಂತು ಎಂಬುದನ್ನು ಆಸ್ಪತ್ರೆ ಆಡಳಿತ ನಿರಾಕರಿಸಿದೆ. ಅಷ್ಟೇ ಅಲ್ಲದೆ, ಟ್ರಿನಿಡಾಡ್ ಮತ್ತು ಟೊಬಾಗೊ ಗಾರ್ಡಿಯನ್ ನೈರುತ್ಯ ವಲಯ ಆರೋಗ್ಯ ಪ್ರಾಧಿಕಾರ (NWRHA) ಕೂಡ ಹಾವು ಬಂದಿತ್ತು ಎಂಬುದನ್ನು‌ ನಿರಾಕರಿಸಿದೆ.‌

ಮಂಗ ಬಂದಿದ್ದು ನಿಜ. ಇನ್ನು ಮುಂದೆ ಅಂಥ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು. ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳ ಸುರಕ್ಷತೆಯ ಬಗ್ಗೆ ಗಮನ ಹರಿಸಲಾಗುವುದು ಎಂದು NWRHA ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...