
ಈ ಬೀದಿಯಲ್ಲಿ ಒಂದು ಫ್ರಿಡ್ಜ್‌ಅನ್ನು ಇಡಲಾಗಿದ್ದು, ಅದರ ಮೇಲೆ, “ನಿಮಗೆ ಏನು ಕೊಡಲು ಸಾಧ್ಯವೋ ಅದನ್ನು ಕೊಡಿ, ಏನು ತೆಗೆದುಕೊಳ್ಳಬಹುದೋ ಅದನ್ನು ತೆಗೆದುಕೊಳ್ಳಿ,” ಎಂದು ಬರೆಯಲಾಗಿದೆ.
ಈ ಬೀದಿಯಲ್ಲಿರುವ ಕ್ರೀಡಾ ಪ್ರತಿಷ್ಠಾನವೊಂದರ ಮಾಲೀಕರಾದ ಅಹಮದ್ ಖಾನ್ ಈ ಫ್ರಿಡ್ಜ್‌ನ ಕಲ್ಪನೆಯನ್ನು ಜಾರಿಗೆ ತಂದಿದ್ದಾರೆ. “ನಿಜಕ್ಕೂ ಅಗತ್ಯ ಇರುವ ಮಂದಿ ಈ ಫ್ರಿಡ್ಜ್‌ನಿಂದ ತಮಗೆ ಬೇಕಾದ ವಸ್ತುಗಳನ್ನು ಯಾವುದೇ ಸಂಕೋಚ ಇಲ್ಲದೇ ತೆಗೆದುಕೊಳ್ಳಬಹುದಾಗಿದೆ. ಈ ಫ್ರಿಡ್ಜ್ ದಿನದ 24 ಗಂಟೆಗಳೂ ತೆರೆದೆ ಇರುತ್ತದೆ,” ಎಂದು ಖಾನ್ ತಿಳಿಸಿದ್ದಾರೆ.