alex Certify ಮನೆ ಬಾಗಿಲಿಗೆ ಬಂದ ಅಪರಿಚಿತನಿಂದ ವಿಚಿತ್ರ ಬೇಡಿಕೆ: ಇದನ್ನು ಕೇಳುತ್ತಲೆ ಕಂಗಾಲಾದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಗಿಲಿಗೆ ಬಂದ ಅಪರಿಚಿತನಿಂದ ವಿಚಿತ್ರ ಬೇಡಿಕೆ: ಇದನ್ನು ಕೇಳುತ್ತಲೆ ಕಂಗಾಲಾದ ಮಹಿಳೆ…!

ಮನೆಯ ಭದ್ರತೆ ಸಲುವಾಗಿ ಮನೆಯ ಹೊರಾಂಗಣದಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಮುಖ್ಯದ್ವಾರಗಳಿಗೆ ಪೀಪ್​ಹೋಲ್ಸ್​ ಮಾಡಲಾಗುತ್ತೆ.

ಈ ಸಾಧನಗಳ ಸಹಾಯದಿಂದ ನೀವು ಮನೆಯ ಒಳಗೇ ಇದ್ದು ಹೊರಗಡೆ ಯಾರೂ ಬಾಗಿಲು ಬಡಿಯುತ್ತಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಬಹುದು. ಮನೆಯಲ್ಲಿ ಒಂಟಿಯಾಗಿ ಇರುವ ವೇಳೆ ಹಾಗೂ ಮಕ್ಕಳಿರುವ ಮನೆಗಳಲ್ಲಿ ಈ ಸಾಧನಗಳು ತುಂಬಾನೇ ಸಹಕಾರಿಯಾಗಿರುತ್ವೆ.

ಮನೆಯ ಭದ್ರತೆಗೆಂದು ಅಳವಡಿಸುವ ಈ ಸಾಧನಗಳಲ್ಲಿ ಕೆಲವೊಮ್ಮೆ ನಾವು ನೋಡುವ ದೃಶ್ಯಗಳು ವಿಚಿತ್ರವಾಗಿರೋದ್ರ ಜೊತೆಗೆ ನಮಗೆ ಅದನ್ನ ವಿವರಣೆ ಮಾಡೋಕೂ ಕಷ್ಟವಾಗಿಬಿಡುತ್ತೆ.

ಸ್ಕಾಟ್​​ಲೆಂಡ್​ನ ನಿವಾಸಿಯೊಬ್ಬರಿಗೆ ಇಂತದ್ದೇ ಒಂದು ವಿಚಿತ್ರ ಅನುಭವವಾಗಿದೆ. ಮನೆಯ ಡೋರ್​​ಬೆಲ್​ ರಿಂಗಣಿಸಿದ್ದನ್ನು ಕಂಡ ಇವರು ಬಾಗಿಲ ಬಳಿ ಬರುತ್ತಿದ್ದಂತೆಯೇ ಹೊರಗಿದ್ದ ವ್ಯಕ್ತಿ ತನಗೆ ಶೌಚಾಲಯಕ್ಕೆ ಹೋಗಲು ಅವಕಾಶ ನೀಡಿ ಎಂದು ಗೋಗರೆದಿದ್ದಾನೆ.

ಇವಾರ್ಟ್ ಎಂಬವರು ರಾತ್ರಿಯಾಗಿದ್ದರಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬಾಗಿಲ ಬಳಿ ಸದ್ದಾಗಿದ್ದನ್ನ ಕಂಡು ಬಂದು ನೋಡಿದ್ರೆ ಪಾನಮತ್ತನಾಗಿದ್ದ ವ್ಯಕ್ತಿ ತನಗೆ ಮಲ ವಿಸರ್ಜನೆ ಮಾಡಲು ಶೌಚಾಲಯಕ್ಕೆ ಅವಕಾಶ ನೀಡಿ ಎಂದು ವಿನಂತಿಸಿದ್ದಾನೆ.

ನನಗೆ ಮಲವಿಸರ್ಜನೆ ಮಾಡಲು ಅವಕಾಶ ನೀಡುತ್ತೀರೇ ಎಂದು ಪಾನಮತ್ತನಾಗಿದ್ದ ವ್ಯಕ್ತಿ ಹೇಳೋದನ್ನ ಕೇಳಬಹುದಾಗಿದೆ. ನಮ್ಮ ಮನೆಯಿಂದ ತೆರಳಿ. ಇಲ್ಲವಾದಲ್ಲಿ ಪೊಲೀಸರಿಗೆ ಕರೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ ಬಳಿ ಆತ ಅಶ್ಲೀಲ ಚಿಹ್ನೆ ಪ್ರದರ್ಶಿಸಿ ತೆರಳಿದ್ದಾನೆ. ಏಪ್ರಿಲ್​ 11ರಂದು ನಡೆದ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...