ಮನೆಯ ಮುಂದಿನ ಉದ್ಯಾನದಲ್ಲಿರುವ ಹುಲ್ಲುಹಾಸು ಇದ್ದಕ್ಕಿದ್ದಂತೆ ಕಾಣೆಯಾಗಿದ್ದನ್ನು ನೋಡಿದಾಗ ನಿಮಗೆ ಏನನಿಸಬಹುದು? ಬ್ರಿಟನ್ ನ ಸೇಂಟ್ ಹೆಲೆನ್ಸ್ ಪ್ರದೇಶದ ಎಲಿಝಬೆತ್ ಎಂಬವರಿಗೆ ಇಂಥದ್ದೇ ಅನುಭವವಾಗಿದೆ.
ಉದ್ಯಾನದಲ್ಲಿದ್ದ ಖಾಲಿ ಪ್ಯಾಚ್ ಅನ್ನು ಕಂಡ ಮಗ, ಅಚ್ಚರಿಗೊಳಗಾಗಿ ತನ್ನ ಅಮ್ಮನನ್ನು ಕರೆದಿದ್ದಾನೆ. ಏನಾಗಿದೆ ಎಂದು ನೋಡುವಷ್ಟರಲ್ಲಿ ಆ ಲಾನ್ ಕಾಣೆಯಾಗಿದೆ ಎಂದು ತಿಳಿದುಬಂದಿದೆ.
ಹಾಂ…! ಇಲ್ಲೇನೋ ಪವಾಡ ನಡೆದಿದೆ ಎಂದುಕೊಂಡಿರಾ..? ವಾಸ್ತವದಲ್ಲಿ ಆ ಲಾನ್ ಕೃತಕವಾದ ಟರ್ಫ್. ಆ ಟರ್ಫ್ ಮೇಲೆ ಹೂವಿನ ಗಿಡಗಳಿದ್ದ ಪಾಟ್ ಅನ್ನು ಇಡಲಾಗಿತ್ತು. 100 ಪೌಂಡ್ ತೆತ್ತು ತಂದಿದ್ದ ಈ ಟರ್ಫ್ ಮೇಲೆ ಎಲಿಝಬೆತ್ಗೆ ಬಲೇ ಪ್ರೀತಿ. ಆದರೆ ಈಗ ಅದು ಕಳುವಾಗಿದ್ದು, ಬಲು ಬೇಜಾರಿನಲ್ಲಿದ್ದಾರೆ.