
ಮದುವೆ ದಿನದ ಸಂಭ್ರಮದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ನಾಯಿಯ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾದ ವೇಳೆ ಆ ನಾಯಿಯು ಆತನ ಹೆಂಡತಿಗೆ ಒದೆ ನೀಡಿದ್ದು, ಈ ಫನ್ನಿ ಸೋಶಿಯಲ್ ಮೀಡಿಯಾದ ಜನರನ್ನ ನಗೆಗಡಲಲ್ಲಿ ತೇಲಿಸಿದೆ.
ಮದುಮಗ ನಾಯಿಯನ್ನ ಎತ್ತಿಕೊಳ್ತಾ ಇದ್ದಂತೆ ಮಧುಮಗಳು ಫೋಟೋಗೆ ಪೋಸ್ ಕೊಡಲು ಮುಂದಾಗಿದ್ದಾಳೆ. ಈ ವೇಳೆ ನಾಯಿ ವಧುವಿನ ಹೊಟ್ಟೆಗೆ ಜೋರಾಗಿ ಒದೆ ಕೊಟ್ಟಿದೆ.
ಈ ಘಟನೆಗೆ ಸಾಕ್ಷಿಯಾದ ಪ್ರತಿಯೊಬ್ಬರೂ ನನ್ನನ್ನ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ ಅಂತಾ ವಧು ಹೇಳಿದ್ದಾಳೆ. ನೆಟ್ಟಿಗರು ಸಹ ಈ ವಿಡಿಯೋ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ .