alex Certify ಫೋಟೋ ಕ್ಲಿಕ್ಕಿಸಿಕೊಳ್ಳೋದು ಅಂದರೆ ನಿಮಗೆ ಇಷ್ಟವಾಗಲ್ವಾ..? ಹಾಗಿದ್ದಲ್ಲಿ ಈ ವಿಡಿಯೋನ್ನೊಮ್ಮೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋ ಕ್ಲಿಕ್ಕಿಸಿಕೊಳ್ಳೋದು ಅಂದರೆ ನಿಮಗೆ ಇಷ್ಟವಾಗಲ್ವಾ..? ಹಾಗಿದ್ದಲ್ಲಿ ಈ ವಿಡಿಯೋನ್ನೊಮ್ಮೆ ನೋಡಿ

ಫೋಟೋ ಕ್ಲಿಕ್ಕಿಸಿಕೊಳ್ಳೋದು ಎಲ್ಲರಿಗೂ ಇಷ್ಟವಾಗುವ ಕೆಲಸವಲ್ಲ. ಒಂದು ವೇಳೆ ನೀವು ಫೋಟೋ ಪ್ರಿಯರಲ್ಲದೇ ಇದ್ದು ನೂರಾರು ಫೋಟೋಗೆ ಪೋಸ್​ ಕೊಡಬೇಕಾದ ಅನಿವಾರ್ಯತೆ ಎದುರಾದರಂತೂ ಅದು ಯಮ ಯಾತನೆಯೇ ಸರಿ.

ಇದೇ ರೀತಿಯ ಸಂದರ್ಭವೊಂದರಲ್ಲಿ ತನ್ನ ಗರ್ಲ್​ ಫ್ರೆಂಡ್​ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ತಿದ್ದ ವ್ಯಕ್ತಿ ತುಂಬಾನೇ ಕಿರಿಕಿರಿ ಅನುಭವಿಸುತ್ತಿದ್ದ. ಫೋಟೋಗೆ ಹರ್ಷಚಿತ್ತದಿಂದಲೇ ಪೋಸ್​ ಕೊಟ್ಟಿದ್ದರೂ ಸಹ ಫೋಟೋ ಕ್ಲಿಕ್​ ಆದ ಬಳಿಕ ಆತನ ಮುಖಚರ್ಯೆ ಆತನಿಗೆ ಎಷ್ಟು ಕಿರಿಕಿರಿಯಾಗ್ತಿದೆ ಅನ್ನೋದನ್ನ ಬಿಂಬಿಸುತ್ತಿತ್ತು. ಆತನ ಮುಖಚರ್ಯೆ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು ಈ ವಿಡಿಯೋವನ್ನ ಗರ್ಲ್​ ಫ್ರೆಂಡ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾಳೆ.

ವೆಂಟಿಲೇಟರ್​​ ಖರೀದಿಗಾಗಿ ಸಂಪೂರ್ಣ ‘ಪಿಂಚಣಿ’ ಹಣ ದೇಣಿಗೆ ನೀಡಿದ ವೃದ್ಧ

ಫೋಟೋ ತೆಗೆಸಿಕೊಂಡು ನನ್ನ ಬಾಯ್​ಫ್ರೆಂಡ್​ ಸುಸ್ತಾಗಿದ್ದಾನೆ ಎಂಬರ್ಥದಲ್ಲಿ ಈ ವಿಡಿಯೋಗೆ ಯುವತಿ ಕ್ಯಾಪ್ಶನ್​ ನೀಡಿದ್ದಳು. ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ ಅದರಲ್ಲಿ ಒಬ್ಬರು ಈ ವ್ಯಕ್ತಿಗೆ ಫೋಟೋ ತೆಗೆಸಿಕೊಳ್ಳೋದು ಅಷ್ಟೊಂದು ಇಷ್ಟದ ಕೆಲಸವಲ್ಲ ಎಂದು ಕಾಣುತ್ತೆ. ಆದರೂ ಸಹ ಅವರು ನಿಮ್ಮೊಂದಿಗೆ ಫೋಟೋಗೆ ಪೋಸ್​ ಕೊಟ್ಟಿದ್ದಾರೆ ಅಂದರೆ ಅವರು ನಿಮ್ಮ ಇಷ್ಟಗಳನ್ನ ಗೌರವಿಸ್ತಾರೆ ಎಂದರ್ಥ ಎಂದು ಹೇಳಿದ್ದಾರೆ.

Man's real expression while clicking photo with girlfriend

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...