
ಇದೇ ರೀತಿಯ ಸಂದರ್ಭವೊಂದರಲ್ಲಿ ತನ್ನ ಗರ್ಲ್ ಫ್ರೆಂಡ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ತಿದ್ದ ವ್ಯಕ್ತಿ ತುಂಬಾನೇ ಕಿರಿಕಿರಿ ಅನುಭವಿಸುತ್ತಿದ್ದ. ಫೋಟೋಗೆ ಹರ್ಷಚಿತ್ತದಿಂದಲೇ ಪೋಸ್ ಕೊಟ್ಟಿದ್ದರೂ ಸಹ ಫೋಟೋ ಕ್ಲಿಕ್ ಆದ ಬಳಿಕ ಆತನ ಮುಖಚರ್ಯೆ ಆತನಿಗೆ ಎಷ್ಟು ಕಿರಿಕಿರಿಯಾಗ್ತಿದೆ ಅನ್ನೋದನ್ನ ಬಿಂಬಿಸುತ್ತಿತ್ತು. ಆತನ ಮುಖಚರ್ಯೆ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು ಈ ವಿಡಿಯೋವನ್ನ ಗರ್ಲ್ ಫ್ರೆಂಡ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾಳೆ.
ವೆಂಟಿಲೇಟರ್ ಖರೀದಿಗಾಗಿ ಸಂಪೂರ್ಣ ‘ಪಿಂಚಣಿ’ ಹಣ ದೇಣಿಗೆ ನೀಡಿದ ವೃದ್ಧ
ಫೋಟೋ ತೆಗೆಸಿಕೊಂಡು ನನ್ನ ಬಾಯ್ಫ್ರೆಂಡ್ ಸುಸ್ತಾಗಿದ್ದಾನೆ ಎಂಬರ್ಥದಲ್ಲಿ ಈ ವಿಡಿಯೋಗೆ ಯುವತಿ ಕ್ಯಾಪ್ಶನ್ ನೀಡಿದ್ದಳು. ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ ಅದರಲ್ಲಿ ಒಬ್ಬರು ಈ ವ್ಯಕ್ತಿಗೆ ಫೋಟೋ ತೆಗೆಸಿಕೊಳ್ಳೋದು ಅಷ್ಟೊಂದು ಇಷ್ಟದ ಕೆಲಸವಲ್ಲ ಎಂದು ಕಾಣುತ್ತೆ. ಆದರೂ ಸಹ ಅವರು ನಿಮ್ಮೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ ಅಂದರೆ ಅವರು ನಿಮ್ಮ ಇಷ್ಟಗಳನ್ನ ಗೌರವಿಸ್ತಾರೆ ಎಂದರ್ಥ ಎಂದು ಹೇಳಿದ್ದಾರೆ.