alex Certify ಬೀಳದೆ ಹಾಗೆಯೇ ಕಾರಿನ ಮೇಲಿತ್ತು ಈರುಳ್ಳಿ ಚೀಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಳದೆ ಹಾಗೆಯೇ ಕಾರಿನ ಮೇಲಿತ್ತು ಈರುಳ್ಳಿ ಚೀಲ…!

ನಿಮ್ಮ ಕೈತುಂಬಾ ಶಾಪಿಂಗ್ ಬ್ಯಾಗ್‌ ಗಳಿದ್ದು, ಅವುಗಳನ್ನು ನಿಮ್ಮ ಕಾರಿನ ಡಿಕ್ಕಿಗೆ ತುಂಬಿಸಬೇಕಾದಲ್ಲಿ ಏನು ಮಾಡುವಿರಿ? ಆಗ, ನೆಲದ ಮೇಲೆ ಇಡುವ ಬದಲಿಗೆ ನಮ್ಮ ಕಾರುಗಳ ಛಾವಣಿ ಮೇಲೆ ಆ ವಸ್ತುಗಳನ್ನು ಇಡುತ್ತೇವೆ.

ಕೆಲವೊಮ್ಮೆ, ಎಲ್ಲಾ ಸಾಮಾನುಗಳನ್ನು ಛಾವಣಿ ಮೇಲಿಂದ ಕಾರಿನ ಒಳಗೆ ಇಟ್ಟುಕೊಳ್ಳುವುದನ್ನು ಮರೆತುಬಿಡುತ್ತೇವೆ. ಇಲ್ಲೊಬ್ಬ ಡ್ರೈವರ್ ‌ಗೆ ಹೀಗೇ ಆಗಿದೆ. ಈರುಳ್ಳಿಯ ಬ್ಯಾಗೊಂದನ್ನು ಆತ ಹಾಗೇ ಛಾವಣಿ ಮೇಲೆಯೇ ಬಿಟ್ಟುಬಿಟ್ಟಿದ್ದಾನೆ. ಬಹುತೇಕ ಪ್ರಕರಣಗಳಲ್ಲಿ ಈ ರೀತಿ ಆಗಿದ್ದಲ್ಲಿ ಈರುಳ್ಳಿಯ ಬ್ಯಾಗ್‌ ಬಿದ್ದುಹೋಗಿರಬೇಕಿತ್ತು.

ಆದರೆ, ಈತ ಇಟ್ಟಿದ್ದ ಈರುಳ್ಳಿಯ ಬ್ಯಾಗ್‌ ಛಾವಣಿ ಮೇಲೆ ಹಾಗೇ ಕುಳಿತುಕೊಂಡಿತ್ತು. ಈ ಘಟನೆಯ ವಿಡಿಯೋ ಟ್ವಿಟರ್ ‌ನಲ್ಲಿ ವೈರಲ್ ಆಗಿದೆ. ಕಾರಿನ ಹಿಂದೆ ಹೋಗುತ್ತಿದ್ದ ಮತ್ತೊಂದು ಕಾರಿನ ಡ್ರೈವರ್‌ ಇದನ್ನು ಗಮನಿಸಿ, ಆ ಬ್ಯಾಗನ್ನು ಅವರಿಗೆ ಮರಳಿ ಕೊಟ್ಟಿದ್ದನ್ನು ಇಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...