ಪುಟ್ಟ ಕಂದಮ್ಮಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಕಡಿಮೆಯೇ. ಅವುಗಳ ಚರ್ಮ ತುಂಬಾನೇ ಸೂಕ್ಷ್ಮವಾಗಿರೋದ್ರಿಂದ ಅವುಗಳ ಉಗುರುಗಳನ್ನ ಕಾಲ ಕಾಲಕ್ಕೆ ಕತ್ತರಿಸಬೇಕು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಕಂದಮ್ಮನ ಕೈಗೆ ನಕಲಿ ಉಗುರುಗಳನ್ನ ಅಂಟಿಸಿರುವ ಫೋಟೋವೊಂದು ಸಾಕಷ್ಟು ವಿವಾದವನ್ನ ಸೃಷ್ಟಿಸಿದೆ.
ಫೇಸ್ಬುಕ್ನಲ್ಲಿ ಶೇರ್ ಮಾಡಲಾದ ಫೋಟೋದಲ್ಲಿ ನಕಲಿ ಉಗುರುಗಳಿಂದ ಮಗುವಿನ ಕೈಯನ್ನ ಅಲಂಕರಿಸಲಾಗಿದ್ದು, ಈ ಕೈಯನ್ನ ಮಹಿಳೆ ಹಿಡಿದುಕೊಂಡಿದ್ದಾಳೆ. ಈ ಫೋಟೋಗೆ ನಾನು ಮಕ್ಕಳ ಉಗುರನ್ನೂ ಕಡಿಮೆ ದರದಲ್ಲಿ ಅಲಂಕರಿಸಬಲ್ಲೆ ಎಂದು ಶೀರ್ಷಿಕೆ ನೀಡಲಾಗಿದೆ.
ಆದರೆ ಈ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು ಮಗುವಿಗೆ ಮಾಡಲಾದ ಈ ಮೆನಿಕ್ಯೂರ್ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದು ತುಂಬಾನೆ ಅಪಾಯಕಾರಿ. ಮಗು ಪದೇ ಪದೇ ತನ್ನ ಕಣ್ಣು , ಮೂಗು ಬಾಯಿಗಳನ್ನ ಮುಟ್ಟಿಕೊಳ್ತಾನೇ ಇರುತ್ತೆ. ಹೀಗಾಗಿ ಇಂತಹ ಕೆಲಸ ಮಾಡಬಾರದು ಅಂತಾ ಕಮೆಂಟ್ ಮಾಡಲಾಗಿದೆ.