alex Certify ʼಮಂಗಳʼ ಗ್ರಹ ಅಂಗಳದ HD ಚಿತ್ರಗಳು ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಂಗಳʼ ಗ್ರಹ ಅಂಗಳದ HD ಚಿತ್ರಗಳು ವೈರಲ್

High Resolution Images Show Chaotic Terrain on Mars' Surface Near Valles Marineris

ಮಂಗಳ ಗ್ರಹದ ಸುತ್ತ ಗಿರಕಿ ಹೊಡೆಯುತ್ತಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆರ್ಬೈಟರ್‌ ಒಂದು ಅಂಗಾರನ ಅಂಗಳದಿಂದ ಸೆರೆ ಹಿಡಿದ ಎಚ್‌ಡಿ ಚಿತ್ರಗುಚ್ಛವೊಂದನ್ನು ಭೂಮಿಗೆ ರವಾನೆ ಮಾಡಿದೆ.

ಮಂಗಳನ ಮೇಲಿರುವ ವಾಲ್ಲೆಸ್ ಮ್ಯಾರಿನೆರೀಸ್ ಪ್ರದೇಶದ ಬಳಿ ಇರುವ ಗುಡ್ಡಗಾಡು ಪ್ರದೇಶವೊಂದರ ಚಿತ್ರವನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ.

ಇಲ್ಲಿ ಬಹಳಷ್ಟು ಕುಳಿಗಳು ಇದ್ದು, ಅಂತರಿಕ್ಷದಿಂದ ನಿರಂತರವಾಗಿ ಇಲ್ಲಿಗೆ ಬಂದು ಬಡಿಯುತ್ತಿರುವ ಉಲ್ಕೆಗಳು ಹಾಗೂ ಕ್ಷುದ್ರಗ್ರಹಗಳಿಂದ ಹೀಗೆಲ್ಲಾ ಆಗಿದೆ ಎಂದು ಅಂದಾಜಿಸಲಾಗಿದೆ.

ಹೈ-ರೆಸಲ್ಯೂಷನ್ ಸ್ಟೀರಿಯೋ ಕ್ಯಾಮೆರಾವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಈ ಆರ್ಬೈಟರ್‌ 2004ರಲ್ಲಿ ಭೂಮೇಲ್ಮೈನಿಂದ ಉಡಾವಣೆಯಾಗಿದ್ದು, ಮಂಗಳನ ಸುತ್ತ ಗಿರಕಿ ಹೊಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...