alex Certify ಮೊಸಳೆಯೊಡನೆ ಹೋರಾಡಿ ಪುಟ್ಟ ಮಗನನ್ನು ರಕ್ಷಿಸಿದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆಯೊಡನೆ ಹೋರಾಡಿ ಪುಟ್ಟ ಮಗನನ್ನು ರಕ್ಷಿಸಿದ ತಾಯಿ

ಜಿಂಬಾಬ್ವೆ: ಮೊಸಳೆಯೊಂದಿಗೆ ಹೋರಾಡಿ ಮಗನನ್ನು ರಕ್ಷಿಸಿಕೊಂಡ ಶೂರ ಮಹಾ ತಾಯಿಯ ಕಥೆಯಿದು. ಗೊನರೆಜುವಾ ನ್ಯಾಷನಲ್ ಪಾರ್ಕ್ ನ ರಂಡೆರಾ ನದಿಯಲ್ಲಿ 30 ವರ್ಷದ ಮೌರಿನಾ ಮುಸಿಸಿನ್ಯಾನಾ ಮೀನು ಹಿಡಿಯುತ್ತಿದ್ದಳು.

ಆಕೆಯ ಇಬ್ಬರು ಮಕ್ಕಳು ನದಿ ದಂಡೆಯಲ್ಲಿ ಛತ್ರಿಯ ನೆರಳಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಒಬ್ಬ ಮಗನ‌ ಕೂಗು ಕೇಳಿಸಿದೆ. ನೋಡಿದರೆ ಇನ್ನೊಬ್ಬ ಮಗನನ್ನು ಮೊಸಳೆ‌ ಕಚ್ಚಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಕೂಡಲೇ ಮೌರಿನಾ ಮೊಸಳೆಯೊಂದಿಗೆ ಹೋರಾಡಿ ಮಗನನ್ನು ರಕ್ಷಿಸಿದ್ದಾಳೆ.‌

“ಮಗನ ಕೂಗು ಕೇಳಿಸಿದಾಗ ನಾನು ನದಿ ದಡದತ್ತ ನೋಡಿದೆ. ಅಲ್ಲಿ ಛತ್ರಿ ನೀರಿನಲ್ಲಿ ತೇಲುವುದು ಕಾಣಿಸಿತು. ಮಗನನ್ನು ಮೊಸಳೆ ಕಚ್ಚಿಕೊಂಡು ನೀರಿನಲ್ಲಿ ಹೋಗುತ್ತಿರುವುದು ಕಾಣಿಸಿತು. ತಕ್ಷಣ ಅತ್ತ ಓಡಿ, ಮೊಸಳೆಯ ಮೂಗಿಗೆ ಬೆರಳು ತೂರಿಸಿ ಹಿಡಿದೆ‌. ಈ ವಿಧಾನವನ್ನು ನಮ್ಮ ಹಿರಿಯರು ತಿಳಿಸಿದ್ದರು. ಮೊಸಳೆ ಉಸಿರಾಡಲಾರದೇ ತನ್ನ ದವಡೆಯ ಹಿಡಿತ ಸಡಿಲಿಸಿತು. ನಾ‌ನು ಮಗನನ್ನು ಕರೆತಂದೆ” ಎಂದು ಮೌರಿನಾ ಜಿಂಬಾಬ್ವೆಯ ನ್ಯೂಸ್ ಚಾನಲ್ ಒಂದರಲ್ಲಿ ತಮ್ಮ ಸಾಹಸ ಗಾಥೆ ಹೇಳಿಕೊಂಡಿದ್ದಾರೆ.

ತಾಯಿ – ಮಗ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಮೊಸಳೆಯಿಂದ ಗಾಯಗೊಂಡ ಮಗ‌ನೂ‌‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು‌ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...