ತಮ್ಮ ವಿಶಿಷ್ಟವಾದ ಹೆಸರಿನ ಕಾರಣದಿಂದ ಬ್ರಿಟನ್ ಮೂಲದ ಪತ್ರಕರ್ತೆಯೊಬ್ಬರ ಸೋಷಿಯಲ್ ಮೀಡಿಯಾ ಇನ್‌ಬಾಕ್ಸ್‌ನಲ್ಲಿ ಆರ್ಥಿಕ ವಿಷಯಗಳ ಕುರಿತ ಸಾವಿರಾರು ಪ್ರಶ್ನೆಗಳು ಬಂಬಾರ್ಡ್ ಆಗಿವೆ. ಅಮೆರಿಕದ ಗೇಮಿಂಗ್ ಪರಿಕರಗಳ ರೀಟೇಲರ್ ಗೇಮ್‌ಸ್ಟಾಪ್‌ಗೂ ಈಕೆಗೆ ಸಂಬಂಧವಿರಬಹುದು ಎಂದು ನೆಟ್ಟಿಗರು ತಪ್ಪಾಗಿ ಭಾವಿಸಿದ ಕಾರಣ ಹೀಗೆ ಆಗಿದೆ.
ಜೋವಾ ಹೆಡ್ಜೆಸ್-ಸ್ಟಾಕ್ಸ್ ಹೆಸರಿನ ಈಕೆ ಟ್ವಿಟರ್‌ನಲ್ಲಿ ತನ್ನ ಪೂರ್ಣ ಹೆಸರನ್ನು ಸ್ಪಷ್ಟವಾಗಿ ಬರೆದಿದ್ದು, ’ಹೆಡ್ಜೆಸ್ ಸ್ಟಾಕ್ಸ್’ ತನ್ನ ಸರ್‌ನೇಮ್ ಆಗಿದ್ದು, ಶೇರು ಮಾರುಕಟ್ಟೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಏನಿದು ಮಿಂತ್ರಾ ಲೋಗೋ ವಿವಾದ…? ಇಲ್ಲಿದೆ ನೋಡಿ ಸಂಪೂರ್ಣ ಪ್ರಕರಣದ ಮಾಹಿತಿ
“ಇದು ವಿತ್ತೀಯ ವ್ಯವಹಾರಗಳ ಖಾತೆ ಅಲ್ಲ. ನನ್ನ ಬಳಿ ವ್ಯಾಪಾರ ಸಂಬಂಧಿ ಸಲಹೆಗಳು ಯಾವುವೂ ಇಲ್ಲ. ಹೆಡ್ಜೆಸ್-ಸ್ಟಾಕ್ಸ್ ನನ್ನ ಸರ್‌ನೇಮ್” ಎಂದು ಜೋವಾ ದುಂಡಗಿನ ಅಕ್ಷರಗಳಲ್ಲಿ ಬರೆದಿದ್ದಾರೆ.
ತನ್ನ ಶೇರುಗಳ ಬೆಲೆಯಲ್ಲಿ ಭಯಂಕರ ಏರಿಕೆ ಕಂಡ ಬಳಿಕ ಗೇಮ್‌ಸ್ಟಾಪ್ ಭಾರೀ ಸುದ್ದಿಯಲ್ಲಿದೆ. ’ವಾಲ್‌ಸ್ಟ್ರೀಟ್‌ಬೆಟ್ಸ್’ ಹೆಸರಿನ ರೆಡ್ಡಿಟ್ ಗ್ರೂಪ್ ಒಂದರ ಸದಸ್ಯರು ಗೇಮ್‌ಸ್ಟಾಪ್ ಶೇರುಗಳನ್ನು ಖರೀದಿ ಮಾಡುತ್ತಲೇ ಸಾಗಿದ ಕಾರಣ ಈ ಟ್ರೆಂಡ್ ಸೃಷ್ಟಿಯಾಗಿದೆ.