alex Certify ಅದೃಷ್ಟದ ಸಂಖ್ಯೆಗಾಗಿ 5 ಕೋಟಿ ರೂ. ಹೆಚ್ಚುವರಿಯಾಗಿ ತೆತ್ತ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟದ ಸಂಖ್ಯೆಗಾಗಿ 5 ಕೋಟಿ ರೂ. ಹೆಚ್ಚುವರಿಯಾಗಿ ತೆತ್ತ ಭೂಪ…!

ಸ್ವಂತ ಮನೆ ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿರುತ್ತದೆ. ಇಷ್ಟದ ಮನೆಯನ್ನು ತಮ್ಮದಾಗಿಸಲು ಬಹಷ್ಟು ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ ಮಹಾಶಯ ತನಗಿಷ್ಟವಾದ ನಂಬರ್ ಹೊಂದಿರುವ ಮನೆ ಖರೀದಿಸಲು ದುಬಾರಿ ಹಣ ಪಾವತಿಸಿದ್ದಾನೆ.

ಮೂರು ದೊಡ್ಡ ಮಲಗುವ ಕೋಣೆಗಳಿರುವ ಆ ಮನೆಯ ನಂಬರ್ 65…! ಇದು ಸಿಡ್ನಿಯಲ್ಲಿದೆ. ವರದಿಗಳ ಪ್ರಕಾರ, ಮನೆ ಖರೀದಿದಾರ 65 ತನ್ನ ನೆಚ್ಚಿನ ಸಂಖ್ಯೆಯಾಗಿರುವುದರಿಂದ £ 500,000 (ರೂ. 5.15 ಕೋಟಿ) ಹೆಚ್ಚುವರಿ ಹಣ ಪಾವತಿಸಿದ್ದಾರಂತೆ.

ಹೊರ ರಾಜ್ಯದ ಯುವತಿಯರ ಕರೆತಂದು ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ

40 ದಾಟಿದ ಮಧ್ಯ ವಯಸ್ಕ ಆ ವ್ಯಕ್ತಿಯು ಒಂದು ವರ್ಷದಿಂದ ಮನೆ ಹುಡುಕುತ್ತಿದ್ದ ಎಂಬ ಮಾಹಿತಿ ಇದೆ. ರಿಯಲ್ ಎಸ್ಟೇಟ್‌ಗೆ ಸಂಬಂಧಪಟ್ಟ ವೆಬ್‌ಸೈಟ್ ನಲ್ಲಿ ಪ್ರಸ್ತಾಪವಾಗಿದ್ದ ಮನೆಗೆ 2.2 ಮಿಲಿಯನ್ ಪಾವತಿಸುವ ಬದಲು, 2.7 ಮಿಲಿಯನ್ ಹಣ ಪಾವತಿಸಿದ್ದಾನೆ.

ಕೊನೆಗೂ ಆತ ಇಷ್ಟಪಟ್ಟದ್ದನ್ನು ಪಡೆದ ಬಳಿಕ ತಡ ಮಾಡದೇ, ಮನೆಯನ್ನು ಪರೀಕ್ಷಿಸಲು ಹೋಗಿದ್ದ. ಮನೆ ಸಂಖ್ಯೆ ಮತ್ತು ಆ ಜಾಗವನ್ನು ಗಮನಿಸಿ ಹರಾಜಿಗೆ ಮುಂಚೆಯೇ ಖರೀದಿಸಲು ಆಸಕ್ತಿ ತೋರಿದ್ದರು ಎಂದು ರಿಯಲ್ ಎಸ್ಟೇಟ್ ಏಜೆಂಟ್ ಹೇಳಿದ್ದಾರೆ.

ಸಂಖ್ಯಾಶಾಸ್ತ್ರವು ಕೆಲವರಿಗೆ ಇಷ್ಟದ ವಿಷಯ. ಜೀವನದಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಶಾಸ್ತ್ರ ನಂಬುತ್ತಾರೆ.‌ ಈತನೂ ಹೀಗೆಯೇ ಇರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...