ಅಮೆರಿಕದ ನಿರಾಶ್ರಿತನೊಬ್ಬನಿಗೆ ಅಪರಿಚಿತರು ಬರೋಬ್ಬರಿ 12 ಲಕ್ಷ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದು ಇದನ್ನ ಸ್ವೀಕರಿಸಿದ ವ್ಯಕ್ತಿ ಕಣ್ಣೀರು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
46 ವರ್ಷದ ಮೈಕ್ ಎಂಬವರು ಮನೆಯೇ ಇಲ್ಲದ ಕಾರಣ ನಿರಾಶ್ರಿತರಾಗಿದ್ದರು. ಒಂದು ದಿನ 24 ವರ್ಷದ ವ್ಲೋಗರ್ ಫಿಲಿಫ್ ಎಂಬವರು ಕಾರಿನ ಗಾಜನ್ನ ಸ್ವಚ್ಛಗೊಳಿಸಲು ಮುಂದಾದ ವೇಳೆ ಮೈಕ್ರ ಅದೃಷ್ಟ ಬದಲಾಗಿದೆ.
ಫಿಲಿಪ್ ಮೊದಲು ಮೈಕ್ಗೆ ಕಾರಿನ ಗಾಜನ್ನ ಸ್ವಚ್ಛಗೊಳಿಸಲು ಅವಕಾಶ ನೀಡಿರಲಿಲ್ಲ. ಆದರೆ ಒಬ್ಬನೇ ಒಂಟಿಯಾಗಿ ಕುಳಿತಿದ್ದ ಮೈಕ್ರನ್ನ ನೋಡಿದ ಫಿಲಿಪ್ ಆತನನ್ನ ಕಾರಿನೊಳಗೆ ಕರೆದು ಸ್ಯಾಂಡ್ವಿಚ್ ನೀಡಿದ್ದರು.
ಹೆಲ್ಮೆಟ್ ಧರಿಸದ ಗರ್ಭಿಣಿಯನ್ನು 3 ಕಿ.ಮೀ. ನಡೆಸಿದ ಪೊಲೀಸ್ ಅಧಿಕಾರಿ
ಇದಾದ ಬಳಿಕ ಇವರಿಬ್ಬರ ನಡುವೆ ಸ್ನೇಹ ಬಾಂದವ್ಯ ಮೂಡಿದೆ. ಕಾರಿನಲ್ಲಿ ಇವರಿಬ್ಬರ ನಡುವೆ ನಡೆಯುತ್ತಿದ್ದ ಸಂಭಾಷಣೆಗಳನ್ನ ರೆಕಾರ್ಡ್ ಮಾಡಿ ಫಿಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡ್ತಿದ್ರು. ಮೈಕ್ರ ಜೀವನದ ಕತೆಯನ್ನ ಕೇಳಿದ ಅನೇಕರು ಮರುಗಿದ್ರು. ಪರಿಣಾಮ ಮೈಕ್ಗಾಗಿ ದೇಣಿಗೆ ಸಂಗ್ರಹವಾಗೋಕೆ ಶುರುವಾಯ್ತು.
12 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದ ಫಿಲಿಪ್ ಹಣವನ್ನ ಮೈಕ್ಗೆ ನೀಡಿದ್ದಾರೆ. ಈ ಹಣವನ್ನ ನೋಡಿದ ಮೈಕ್ ಭಾವುಕಾರದ್ರು. ಅಲ್ಲದೇ ಫಿಲಿಪ್ ಇದು ನನ್ನ ಜೀವನದ ಅತ್ಯಮೂಲ್ಯ ಕ್ಷಣ ಎಂದು ಹೇಳಿದ್ದಾರೆ.