alex Certify ಮನ ಕಲಕುತ್ತೆ ಆನೆಗಳ ಹಿಂಡಿನ ಈ ಛಾಯಾಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಕಲಕುತ್ತೆ ಆನೆಗಳ ಹಿಂಡಿನ ಈ ಛಾಯಾಚಿತ್ರ

ಮಾನವನ ದುರಾಸೆಯ ಪರಾಕಾಷ್ಠೆಯಿಂದ ಭೂಮಂಡಲಕ್ಕೆ ಆಗುತ್ತಿರುವ ವ್ಯಾಪಕ ಹಾನಿ ಹಾಗೂ ಇತರ ಜೀವಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ಸಾಕ್ಷಿಯಾಗುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ.

ಕೆಲವು ಛಾಯಾಚಿತ್ರಗಳು ಅದೆಷ್ಟು ಪವರ್‌ಫುಲ್ ಎಂದರೆ, ಒಂದೇ ಒಂದು ಪದದ ಕ್ಯಾಪ್ಷನ್‌ ಕೂಡಾ ಇಲ್ಲದೇ ಪ್ರಬಲ ಸಂದೇಶವೊಂದನ್ನು ರವಾನೆ ಮಾಡಬಲ್ಲವು. ಇಂಥದ್ದೇ ಒಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲಂಡನ್‌ನ Royal Society of Biology ಆಯೋಜಿಸಿದ್ದ ಛಾಯಾಚಿತ್ರದ ಸ್ಫರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ ಚಿತ್ರವೊಂದು ಮನುಕುಲದ ಕೆಟ್ಟ ಮನಸ್ಥಿತಿಯನ್ನು ಪ್ರತಿಫಲಿಸುವಂತೆ ಕಾಣುತ್ತಿದೆ. ‘Our Changing World’ ಥೀಮ್‌ನಲ್ಲಿ ಲಗತ್ತಿಸಲಾಗಿದ್ದ ಈ ಚಿತ್ರವನ್ನು ನೋಡಿದ ಮೇಲೆ ನಿಜಕ್ಕೂ ಇದಕ್ಕೆ ಯಾವುದೇ ಕ್ಯಾಪ್ಷನ್ ಬೇಡ ಎನಿಸುತ್ತಿದೆ.

ಶ್ರೀಲಂಕಾದಲ್ಲಿರುವ ತ್ಯಾಜ್ಯ ವಿಲೇವಾರಿ ಜಮೀನಿನಲ್ಲಿ ಪ್ಲಾಸ್ಟಿಕ್‌ಯುಕ್ತ ತ್ಯಾಜ್ಯದ ನಡುವೆ ಆಹಾರ ಹುಡುಕುತ್ತಿರುವ ಆನೆಗಳ ಹಿಂಡನ್ನು ಇಲಕ್ಸನ್ ತಮರಪಾಲನ್ ಹೆಸರಿನ ಛಾಯಾಗ್ರಾಹಕ ಸೆರೆ ಹಿಡಿದಿದ್ದಾರೆ.

Stark photo of elephant herd wins Royal Society of Biology competitionA harrowing image of a herd of elephants eating…

Posted by Tharmapalan Tilaxan on Wednesday, October 7, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...