ಆಟಿಸಮ್ ಸಮಸ್ಯೆ ಇದ್ದ ಆಸ್ಟ್ರೇಲಿಯಾದ 14 ವರ್ಷದ ಹುಡುಗನೊಬ್ಬ ಇಲ್ಲಿನ ವಿಕ್ಟೋರಿಯಾದ ಬುಶ್‌ಲೆಂಡ್‌ನ ಕೊರೆಯುವ ಚಳಿಯಲ್ಲಿ ಏಕಾಂತದಲ್ಲಿ ಎರಡು ರಾತ್ರಿಗಳನ್ನು ಕಳೆದು ಜೀವಂತವಾಗಿ ಉಳಿದುಬಂದಿದ್ದಾನೆ.
ವಿಲಿಯಮ್ ಕಲಘನ್ ಹೆಸರಿನ ಈ ಹುಡುಗ, ಕಳೆದ ವಾರ ತನ್ನ ಮನೆಯಿಂದ ತಪ್ಪಿಸಿಕೊಂಡಿದ್ದ. ಇದಾದ ಬೆನ್ನಿಗೇ ಈತನ ಹುಡುಕಾಟಕ್ಕೆ ದೊಡ್ಡ ಜಾಲವನ್ನೇ ಬೀಸಲಾಗಿತ್ತು. ಇಲ್ಲಿನ ಮೌಂಟ್ ಡಿಸಪಾಯಿಂಟ್ಮೆಂಟ್ ಎಂಬಲ್ಲಿ ಈತನನ್ನು ಪತ್ತೆ ಮಾಡಿದ ವಿಕ್ಟೋರಿಯಾ ಪೊಲೀಸರು ಆತನನ್ನು ಮರಳಿ ಪೋಷಕರಿಗೆ ಒಪ್ಪಿಸಿದ್ದಾರೆ.
ಬೆನ್ ಗೆಬ್ಸ್ ಎಂಬ ಸ್ವಯಂ ಸೇವಕನೊಬ್ಬ ಈತನನ್ನು ಪತ್ತೆ ಮಾಡಿದ್ದಾರೆ.
https://www.facebook.com/victoriapolice/photos/a.223960551009422/3945571658848274/?type=3