alex Certify ಹೆಚ್ -1ಬಿ ವೀಸಾ ಉದ್ಯೋಗಿಗಳಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ -1ಬಿ ವೀಸಾ ಉದ್ಯೋಗಿಗಳಿಗೆ ಗುಡ್ ನ್ಯೂಸ್

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಸರ್ಕಾರ ಹೆಚ್-1ಬಿ ವೀಸಾ ನಿಯಮಗಳನ್ನು ಸ್ವಲ್ಪ ಸಡಿಲಿಕೆ ಮಾಡಿದ್ದು, ಅಮೆರಿಕ ಪ್ರವೇಶಿಸಲು ಅನುಮತಿ ನೀಡಿದೆ.

ಹೆಚ್-1ಬಿ ವೀಸಾ ಹೊಂದಿದ ಉದ್ಯೋಗಿಗಳು ವೀಸಾ ನಿಷೇಧದ ಮೊದಲು ತಾವು ಮಾಡುತ್ತಿದ್ದ ಕೆಲಸಕ್ಕೆ ಮರಳುವಂತಿದ್ದರೆ ಅಮೆರಿಕಕ್ಕೆ ಪ್ರವೇಶಿಸಬಹುದಾಗಿದೆ ಎಂದು ಹೇಳಲಾಗಿದೆ.

ಅಮೆರಿಕ ರಾಷ್ಟ್ರೀಯ ಸಲಹಾ ಇಲಾಖೆ ಈ ಕುರಿತಾಗಿ ಮಾಹಿತಿ ನೀಡಿ, ಹೆಚ್-1ಬಿ ವೀಸಾ ಹೊಂದಿದ ಉದ್ಯೋಗಿಗಳು ಈ ಹಿಂದಿನ ಕಂಪನಿಯಲ್ಲಿ ಉದ್ಯೋಗ ಆರಂಭಿಸಲು ಬಯಸಿದರೆ ವೀಸಾ ವರ್ಗೀಕರಣದೊಂದಿಗೆ ಷರತ್ತುಬದ್ಧ ಅನುಮತಿಯೊಂದಿಗೆ ಅಮೆರಿಕಕ್ಕೆ ಪ್ರವೇಶಿಸಬಹುದು. ಪ್ರಾಥಮಿಕ ವೀಸಾ ಹೊಂದಿದವರೊಂದಿಗೆ ಅವರ ಸಂಗಾತಿ ಮತ್ತು ಮಕ್ಕಳಿಗೂ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...