alex Certify ಹೃದಯ ಕಲಕುವ ಸ್ಟೋರಿ…! ರಸ್ತೆ ಬದಿ ಸತ್ತು ಬಿದ್ದ ಸಹೋದರಿಯ ಬಿಟ್ಟು ಬರಲೊಲ್ಲದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯ ಕಲಕುವ ಸ್ಟೋರಿ…! ರಸ್ತೆ ಬದಿ ಸತ್ತು ಬಿದ್ದ ಸಹೋದರಿಯ ಬಿಟ್ಟು ಬರಲೊಲ್ಲದ ಶ್ವಾನ

ರಸ್ತೆ ಬದಿ ಸತ್ತು ಬಿದ್ದಿದ್ದ ಸಹೋದರಿಯನ್ನು ಬಿಟ್ಟು ಬಾರದೆ ಕಾಯ್ದು ಕುಳಿತ ನಾಯಿಯೊಂದರ ಫೋಟೋ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ನಾಯಿಯ ನಿಷ್ಟೆ ಬಗ್ಗೆ ಹಲವಾರು ಕಥೆಗಳನ್ನು ಕೇಳಿದ್ದೇವೆ.‌ ಇತ್ತೀಚೆಗೆ ಕೊರೊನಾ ವೈರಸ್ ಸಂದರ್ಭದಲ್ಲಿ ಆಸ್ಪತ್ರೆ ಮುಂದೆ ತನ್ನ ಮಾಲೀಕನ ಬರುವಿಕೆಗಾಗಿ ನಾಯಿಯೊಂದು ಮೂರು ತಿಂಗಳ ಕಾಲ ಕಾಯ್ದಿದ್ದ ಸುದ್ದಿ ಬಂದಿತ್ತು.

ಇದೀಗ ನಾಯಿಯೊಂದು ತನ್ನ ಸತ್ತ ಸಹೋದರಿಯ ಬಿಟ್ಟು ಬಾರದೆ ಮೃತದೇಹ ಕಾದು ಕುಳಿತ ಪ್ರಸಂಗ ನಡೆದಿದೆ. ಕಿಂಗ್ಸ್ ವಿಲ್ಲೆ ಕ್ಲೆ ಬರ್ಗ್ ಆರೋಗ್ಯ ಇಲಾಖೆಯ ಪ್ರಾಣಿ ನಿಯಂತ್ರಣ ಮತ್ತು ಕೇರ್ ಸೆಂಟರ್ ನವರು ಗಾರ್ಡಿಯನ್ ಕಥೆಯನ್ನು ಫೇಸ್ಬುಕ್ನಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ.

ಸತ್ತ ನಾಯಿಯ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದರು. ಅಲ್ಲಿ ಮೃತ ನಾಯಿ ಪಕ್ಕ ಇನ್ನೊಂದು ನಾಯಿ ಕುಳಿತಿರುವುದು ಕಾಣಿಸಿತು.‌ ಮೃತಶರೀರವನ್ನು ತರಲು ಅಧಿಕಾರಿಗಳಿಗೆ ಕಷ್ಟವಾಗಿದೆ, ಅಲ್ಲಿ ಕಾಯುತ್ತಿದ್ದ ನಾಯಿಯ ಮನವೊಲಿಸುವುದು ಕಷ್ಟಕರವಾಗಿತ್ತಂತೆ. ಹಾಗೂ ಹೀಗು ಅಲ್ಲಿ ಕಾಯ್ದುಕುಳಿತಿದ್ದ ನಾಯಿಯನ್ನು ಮನವೊಲಿಸಿ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕರೆತರಲಾಯಿತು. ಮತ್ತು ಆ ನಾಯಿಗೆ ಗಾರ್ಡಿಯನ್ ಎಂದು ಹೆಸರಿಡಲಾಯಿತು ಎಂಬ ವಿಚಾರವನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.

UPDATE: Guardian is now at our facility. He will be held on stray hold for the required 4 days. We have already…

Posted by Kingsville Kleberg Health Department Animal Control & Care Center on Friday, May 22, 2020

This is Guardian!He's still a little confused about what happened, but at least he is now in a safe place with fresh…

Posted by Kingsville Kleberg Health Department Animal Control & Care Center on Friday, May 22, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...