
ವನ್ಯ ಜೀವಿಗಳು ರಸ್ತೆ ದಾಟುತ್ತಿರುವ ಅನೇಕ ಪೊಟೋಗಳು ಹಾಗೂ ವಿಡಿಯೋಗಳನ್ನು ಕಂಡಿದ್ದೇವೆ. ಮಾನವ-ಪ್ರಾಣಿಗಳ ಸಂಘರ್ಷದ ದೃಷ್ಟಾಂತವಾದ ಇಂಥ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ.
ಇಂಥದ್ದೇ ನಿದರ್ಶನವೊಂದರಲ್ಲಿ, ಮೊಸಳೆಗಳು ರಸ್ತೆ ದಾಟಿಕೊಂಡು, ಜಲಾಗರವೊಂದಕ್ಕೆ ಡೈವ್ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಎರಡು ನಿಮಿಷಗಳ ಈ ವಿಡಿಯೋದಲ್ಲಿ, ಮೊಸಳೆಗಳು ದಾಟಲೆಂದು ವಾಹನಗಳು ನಿಂತಿರುವುದನ್ನು ಕಾಣಬಹುದಾಗಿದೆ.
ಎಲ್ಲಕ್ಕಿಂತ ಮಜ ಅಂದ್ರೆ, ಈ ಮೊಸಳೆಗಳು ರಸ್ತೆ ದಾಟಲು ಕ್ರಾಸ್‌ವಾಕ್ (ಝೀಬ್ರಾ ಕ್ರಾಸಿಂಗ್) ಪಟ್ಟಿಯನ್ನು ಬಳಸಿರುವುದು.
https://www.facebook.com/williamdavidangell/videos/3339238082773355/?t=2