ವಿಡಿಯೋ: ಭೂಕಂಪನದ ತೀವ್ರತೆಗೆ ಪುಟಿದ ನೆಲ 31-12-2020 11:38AM IST / No Comments / Posted In: Latest News, International ಕ್ರೋವೆಷ್ಯಾದ ಕೇಂದ್ರ ಭಾಗದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದ್ದು ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಕ್ಕಪಕ್ಕದ ದೇಶಗಳಲ್ಲೂ ಸಹ ಭೂಕಂಪನದ ಅನುಭವವಾಗಿದೆ. ಕ್ರೋವೇಷ್ಯಾದ ರಾಜಧಾನಿ ಜಾಗ್ರೆಬ್ನಲ್ಲಿ ಅನುಭವಕ್ಕೆ ಬಂದ ಕಂಪನವು ದೂರದ ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲೂ ಸಹ ಕೇಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಲೋವೇನಿಯಾ ತನ್ನ ಏಕೈಕ ಪರಮಾಣು ಸ್ಥಾವರವನ್ನು ಮುಚ್ಚಿದೆ. ಎರಡು ದಿನಗಳ ಒಳಗೆ ಇದೇ ಪ್ರದೇಶದಲ್ಲಿ ಭೂಮಿ ಎರಡು ಬಾರಿ ಕಂಪಿಸಿದೆ. ಸಚಿವರೊಬ್ಬರು ಪರಿಸ್ಥಿತಿ ಬಗ್ಗೆ ವಿವರಿಸುತ್ತಿದ್ದ ವೇಳೆ ಭೂಮಿ ಮತ್ತೊಮ್ಮೆ ಕಂಪಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕಂಪನದ ತೀವ್ರತೆಗೆ ನಿಂತಿದ್ದ ನೆಲ ಅಕ್ಷರಶಃ ಪುಟಿದಂತೆ ಭಾಸವಾಗಿದೆ. #earthquake #petrinja #croatia horrific. ground literally bounced pic.twitter.com/ymZHoT2NIl — Igor Šebo (@igorsebo) December 29, 2020 https://twitter.com/SwAyAm27782681/status/1344149341741539328?ref_src=twsrc%5Etfw%7Ctwcamp%5Etweetembed%7Ctwterm%5E1344149341741539328%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fground-bounced-viral-video-shows-terrifying-moment-as-6-4-magnitude-earthquake-hit-croatia-3228701.html Hard to believe! Never seen earthquake footage even close to this! — Talulla_S (@Drago_Lightning) December 30, 2020