
ಮಂದಿಮಾಗಧರ ಹೃದಯ ಗೆಲ್ಲುವಂಥ ಸಣ್ಣ-ಪುಟ್ಟ ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡುತ್ತಲೇ ಇರುತ್ತೇವೆ. ಇದೀಗ ಅಂಥದ್ದೇ ಒಂದು ನಿದರ್ಶನವೊಂದು ವೈರಲ್ ಆಗಿದೆ.
ಏಪ್ರಿಲ್‌ನಲ್ಲಿ ನಡೆದ ಈ ಘಟನೆಯಲ್ಲಿ, ಚರ್ಚ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳು ತೋರಿದ ಹೃದಯಸ್ಪರ್ಶಿ ಘಟನೆಯೊಂದು ಹೃದಯ ಬೆಚ್ಚಗಾಗಿಸಿದೆ. ಈ ಸಮಾರಂಭದಲ್ಲಿ ಮದುವೆಯಾಗುತ್ತಿದ್ದ ದಂಪತಿಗಳಿಗೆ ಉಂಗುರಗಳನ್ನು ತಂದುಕೊಡಲು ಡೌನ್ ಸಿಂಡ್ರೋಮ್ ಇರುವ ಇಬ್ಬರು ಮಕ್ಕಳನ್ನು ಕರೆತಂದಿದ್ದರು.
ನೈನ್ಸ್ ಧಿರಿಸಿನಲ್ಲಿ ಮಿಂಚುತ್ತಿರುವ ಈ ಪುಟಾಣಿ ಮಕ್ಕಳು ಮದುಮಗಳ ವಿದ್ಯಾರ್ಥಿಗಳು. ಮಕ್ಕಳಿಬ್ಬರೂ ತಮ್ಮ ಬಳಿಗೆ ಬರುತ್ತಿದ್ದಂತೆಯೇ ಮದುಮಗಳ ಕಣ್ಣಾಲಿಗಳಲ್ಲಿ ಆನಂದಭಾಷ್ಪ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಯೂಟ್ಯೂಬರ್ ಜನಾ ಹಿಶಮ್ ಈ ವಿಡಿಯೋವನ್ನು ಸೆರೆ ಹಿಡಿದಿದ್ದು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://twitter.com/JanaHisham/status/1317391879646924800?ref_src=twsrc%5Etfw%7Ctwcamp%5Etweetembed%7Ctwterm%5E1317391879646924800%7Ctwgr%5Eshare_3%2Ccontainerclick_0&ref_url=https%3A%2F%2Fwww.timesnownews.com%2Fthe-buzz%2Farticle%2Fgroom-surprises-his-bride-by-having-her-students-with-down-syndrome-be-the-ring-bearers-watch%2F669557