ಮಗನೊಂದಿಗೆ ಶಾಪಿಂಗ್ ಮಾಡುತ್ತಿದ್ದ ಮಹಿಳೆ ಬಳಿ ಬಂದ ಅಪರಿಚಿತ ಮಹಿಳೆ ಆ ಮಗುವಿಗೆ ಟೆಡ್ಡಿ ಬಿಯರ್ ಗೊಂಬೆಯನ್ನ ಉಡುಗೊರೆಯಾಗಿ ನೀಡಿದ್ದಾರೆ.
ಆದರೆ ಈ ರೀತಿ ಮಗುವಿಗೆ ಗಿಫ್ಟ್ ನೀಡಿದ್ದಕ್ಕೆ ಕಾರಣ ಹೇಳಿದ ಅಪರಿಚಿತ ಮಹಿಳೆಯ ನೋವಿನ ಕತೆ ಕೇಳಿ ತಾಯಿಯ ಕಣ್ಣು ಒದ್ದೆಯಾಗಿದೆ.
ಚೆಲ್ಸಿಯಾ ರಾಬಿನ್ಸನ್ ಭಾನುವಾರ ಮಧ್ಯಾಹ್ನ ಮ್ಯಾಂಚೆಸ್ಟರ್ನಲ್ಲಿ ತನ್ನ 5 ವರ್ಷದ ಮಗ ಕಿಯಾನ್ ಜೊತೆ ಶಾಪಿಂಗ್ ಮಾಡುತ್ತಿದ್ದರು. ಈ ವೇಳೆ ಬಂದ ಅಪರಿಚಿತ ಮಹಿಳೆ ಕಿಯಾನ್ಗೆ ಕ್ರಿಸ್ಮಸ್ ಹಬ್ಬದ ಉಡುಗೊರೆ ನೀಡಿದ್ದಾರೆ.
ಈ ಅಪರಿಚಿತ ಮಹಿಳೆ ತನ್ನ ಮಗುವನ್ನ ಕಳೆದುಕೊಂಡಿದ್ದು ತಮ್ಮ ಮಗುವಿನ ಸವಿ ನೆನಪಿಗಾಗಿ ಮಹಿಳೆ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೇರೆ ಮಕ್ಕಳಿಗೆ ಗಿಫ್ಟ್ಗಳನ್ನ ನೀಡುತ್ತಾರಂತೆ.
ಆ ಅಪರಿಚಿತ ಮಹಿಳೆ ಪ್ರತಿ ವರ್ಷ ಈ ಸಮಯದಲ್ಲಿ 2 ಟೆಡ್ಡಿ ಬಿಯರ್ಗಳನ್ನ ಖರೀದಿ ಮಾಡುತ್ತಾರಂತೆ. ಹಾಗೂ ಮ್ಯಾಂಚೆಸ್ಟರ್ಗೆ ತೆರಳಿ ತನ್ನ ಮಗುವಿನ ವಯಸ್ಸಿನ ಆಸುಪಾಸಿನ ಮಕ್ಕಳಿಗೆ ಒಂದು ಗೊಂಬೆಯನ್ನ ಉಡುಗೊರೆಯಾಗಿ ನೀಡುತ್ತಾರೆ. ಹಾಗೂ ಇನ್ನೊಂದು ಗೊಂಬೆ ತನ್ನ ತನ್ನ ಮಗುವಿನ ಸವಿ ನೆನಪಿಗಾಗಿ ಇಟ್ಟುಕೊಳ್ತಾರಂತೆ.