alex Certify ಕೊರೊನಾ ಸೋಂಕಿತ ಕುಟುಂಬಸ್ಥರಿಗಾಗಿ ಮನೆಯನ್ನೇ ಐಸಿಯು ಮಾಡಿದ ವೈದ್ಯಕೀಯ ಸಿಬ್ಬಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತ ಕುಟುಂಬಸ್ಥರಿಗಾಗಿ ಮನೆಯನ್ನೇ ಐಸಿಯು ಮಾಡಿದ ವೈದ್ಯಕೀಯ ಸಿಬ್ಬಂದಿ..!

ಪತ್ನಿ ಹಾಗೂ ಆಕೆಯ ಪೋಷಕರು ಕೊರೊನಾ ಸೋಂಕಿಗೆ ಒಳಗಾದ ಬಳಿಕ ಅವರನ್ನ ಆಸ್ಪತ್ರೆಗೆ ಸೇರಿಸೋದು ಸೂಕ್ತವಲ್ಲವೆಂದು ಭಾವಿಸಿದ ವೈದ್ಯಕೀಯ ಸಿಬ್ಬಂದಿಯೊಬ್ಬ ಮನೆಯಲ್ಲೇ ಐಸಿಯು ನಿರ್ಮಾಣ ಮಾಡಿದ ಘಟನೆ ಗ್ರೀಸ್​ನಲ್ಲಿ ನಡೆದಿದೆ.

ಪಟ್ಟಣದಿಂದ ಸುಮಾರು 30 ಕಿಲೋಮೀಟರ್​ ದೂರದಲ್ಲಿ ಅಗಿಯೋಸ್​ ಅಥಾನಾಸಿಯೋಸ್​ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆಯ ಕೆಳಗಿರುವ ಅಪಾರ್ಟ್​ಮೆಂಟ್​​ನಲ್ಲಿ ತಾತ್ಕಾಲಿಕ ಐಸಿಯುವನ್ನ ಸ್ಥಾಪನೆ ಮಾಡಲಾಯ್ತು.

ಈ ಅಪಾರ್ಟ್​ಮೆಂಟ್​​ಗೆ ಐಸಿಯುಗೆ ಬೇಕಾದ ಆಮ್ಲಜನಕ ವಿತರಣಾ ಯಂತ್ರಗಳು, ಮಾನಿಟರ್​ಗಳನ್ನ ಅವರು ಬಾಡಿಗೆಗೆ ಪಡೆದರು. ಇಲ್ಲಿ ತನ್ನ ಕುಟುಂಬಸ್ಥರನ್ನ ದಾಖಲಿಸಿ ಚಿಕಿತ್ಸೆ ನೀಡಿದ್ರು.

ಅಳಿಯನ ಸಹಾಯದಿಂದ ನಾವು ಪ್ರಾಣಾಪಾಯದಿಂದ ಬಚಾವಾಗೋಕೆ ಸಾಧ್ಯವಾಯ್ತು. ಐಸಿಯುಗೆ ಕೊರತೆ ಇದ್ದ ಈ ಸಮಯದಲ್ಲಿ ನಾವು ಬದುಕೋದೇ ಕಷ್ಟವಿತ್ತು ಅಂತಾ ವೈದ್ಯಕೀಯ ಸಿಬ್ಬಂದಿಯ ಅತ್ತೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...